ಮೈಸೂರು: SC ST ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಶಾಸಕ ಯತೀಂದ್ರ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ತಾಲೂಕಿನ ಎಸ್ಸಿ ಎಸ್ಟಿ ಸಮುದಾಯದ ಮುಖಂಡರಿಂದ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಮನವಿ ಸಲ್ಲಿಕೆಯಾಗಿದೆ. ಕಾಂಗ್ರೆಸ್ ಪಕ್ಷ ನಾಗಮೋಹನದಾಸ್ ವರದಿ ಜಾರಿಗೆ ಬದ್ಧವಿದೆ. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರಸನ್ನನಂದ ಸ್ವಾಮಿಗಳು ಕಳೆದ 208 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಅವರು ನಮ್ಮ ತಂದೆಯವರ ಜೊತೆ ನಾನು ಸಹ ಶ್ರೀಗಳನ್ನ ಭೇಟಿ ಮಾಡಿದ್ದೇನೆ. ನಾಳೆಯಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ಈ ವಿಚಾರವಾಗಿ ಮಾತನಾಡುತ್ತೇನೆ. ಸರ್ಕಾರ ಹಾಗೂ ಸ್ಪೀಕರ್ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂಬುದಾಗಿ ತಿ.ನರಸೀಪುರದಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
PublicNext
11/09/2022 03:39 pm