ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ಏನ್ರೀ ಇದು… ಎಲ್ಲರೂ ಸೇರಿಕೊಂಡು ಆಟ ಆಡ್ತಾ ಇದ್ದೀರಾ--ಶಾಸಕ ದರ್ಶನ್ ಧ್ರುವನಾರಾಯಣ್ ಗರಂ

ನಂಜನಗೂಡು: ಕೈ ಮತ್ತು ಕಾಲಿನಲ್ಲಿ ಟಚ್ ಮಾಡಿದ್ರೆ ಸಾಕು ಪೈಪ್ ಗಳು ಕಿತ್ತು ಬರುತ್ತಿವೆ. ಏನ್ರೀ ಇದು ಎಲ್ಲರೂ ಸೇರಿಕೊಂಡು ಆಟ ಆಡ್ತಾ ಇದ್ದೀರಾ ಎಂದು ಅಧಿಕಾರಿಗಳ ವಿರುದ್ಧ ಶಾಸಕ ದರ್ಶನ್ ಧ್ರುವನಾರಾಯಣ್ ಗರಂ ಆಗಿದ್ದಾರೆ.

ನಂಜನಗೂಡು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣ ಮಾಡಲಾಗಿದ್ದ, ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ 4 ಕೊಠಡಿಗಳು ಮತ್ತು 3 ಶೌಚಾಲಯ ಕಟ್ಟಡವನ್ನು ಉದ್ಘಾಟನೆ ಮಾಡಲು ಬಂದ ಶಾಸಕ ದರ್ಶನ್ ಧ್ರುವನಾರಾಯಣ್ ಶೌಚಾಲಯದ ಕಳಪೆ ಕಾಮಗಾರಿಯನ್ನು ನೋಡಿ ಶಾಕ್ ಆಗಿದ್ದಾರೆ.

ಟೇಪ್ ಕತ್ತರಿಸಿ ಉದ್ಘಾಟನೆ ಮಾಡಿದ ಬಳಿಕ ಪರಿಶೀಲನೆ ನಡೆಸಿದರು. ಶೌಚಾಲಯಕ್ಕೆ ಅಳವಡಿಸಿರುವ ವಸ್ತುಗಳು ಕ್ವಾಲಿಟಿ ಇಲ್ಲ, ಕಳಪೆ ಗುಣಮಟ್ಟದ ಕಾಮಗಾರಿ ನಡೆಸಲಾಗಿದೆ. ಸರಿಯಾಗಿ ಕೆಲಸ ಮಾಡದೆ ಎಲ್ಲರೂ ಸೇರಿಕೊಂಡು ಆಟ ಆಡ್ತಾ ಇದ್ದೀರಾ... ಏನ್ರೀ ಇದು ಕಾಮಗಾರಿ..? ಇಂತಹ ಕಾಮಗಾರಿಗೆ ಟೇಪ್ ಕಟ್ ಮಾಡಲು ಏಕೆ ಕರೆದ್ರೀ.. ಎಂದು ಅಧಿಕಾರಿಗಳನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಈ ಕೂಡಲೇ ಗುಣಮಟ್ಟದ ವಸ್ತುಗಳನ್ನು ಅಳವಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

Edited By : Vinayak Patil
PublicNext

PublicNext

07/12/2024 06:30 pm

Cinque Terre

23.01 K

Cinque Terre

1

ಸಂಬಂಧಿತ ಸುದ್ದಿ