ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಚಿರತೆ ಭೀತಿ: ಮೇಟಗಳ್ಳಿ ಸುತ್ತಮುತ್ತಲ ಶಾಲೆಗಳಿಗೆ ರಜೆ

ಮೈಸೂರು: ಬೆಳಗಾವಿ ಆಯ್ತು ಇದೀಗ ಮೈಸೂರಿಗೆ ಚಿರತೆ ಭೀತಿ ಶುರುವಾಗಿದೆ. ಮೈಸೂರಿನ ಆರ್.ಬಿ.ಐ. ನೌಕರರಿಗೆ ಚಿರತೆ ಕಾಟ ಬಹಳ ಜಾಸ್ತಿಯಾಗಿದೆ.

ಕಳೆದ 2 ವಾರದಿಂದ ಚಿರತೆಗಳ ಓಡಾಟ ಹೆಚ್ಚಾಗಿದ್ದು ಆರ್.ಬಿ.ಐ. ನೌಕರರು, ಕುಟುಂಬಸ್ಥರು ಭಯಭೀತರಾಗಿದ್ದಾರೆ. ಮೈಸೂರಿನ ಹೊರ ವಲಯದ ಮೇಟಗಳ್ಳಿಯ ನೋಟು ಮುದ್ರಣಾಲಯ ಸುತ್ತ ಚಿರತೆಗಳು ಬೀಡು ಬಿಟ್ಟಿವೆ.

ಎರಡು ಮರಿಗಳೊಂದಿಗೆ ತಾಯಿ ಚಿರತೆ ಸಂಚಾರ ಮಾಡುತ್ತಿದ್ದು, ಚಿರತೆ ಕಂಡು ನೌಕರರು ಕಂಗೆಟ್ಟಿದ್ದಾರೆ. ಬೀದಿ ನಾಯಿಗಳನ್ನು ಚಿರತೆ ಎಳೆದೊಯ್ಯುತ್ತಿದ್ದು, ದಿನದಿಂದ ದಿನಕ್ಕೆ ಈ ಭಾಗದಲ್ಲಿ ನಾಯಿಗಳು ಕಡಿಮೆಯಾಗುತ್ತಿದ್ದು, ಜನರು ಮನೆಯಿಂದ ಹೊರಗೆ ಬರಲೂ ಹೆದರುತ್ತಿದ್ದಾರೆ. ಹೀಗಾಗಿ ಈ ಭಾಗದಲ್ಲಿರೋ ಕೇಂದ್ರೀಯ ವಿದ್ಯಾಲಯಕ್ಕೆ ವಾರದಿಂದ ರಜೆ ನೀಡಲಾಗಿದೆ.

ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಎರಡು ಕಡೆ ಬೋನ್ ಇಟ್ಟರೂ ಚಿರತೆ ಸೆರೆಯಾಗಿಲ್ಲ

Edited By :
PublicNext

PublicNext

09/09/2022 03:14 pm

Cinque Terre

35.21 K

Cinque Terre

1

ಸಂಬಂಧಿತ ಸುದ್ದಿ