ಮೈಸೂರು: ಹೆಚ್.ಡಿ.ಕೋಟೆ ತಾಲ್ಲೂಕಿನ ಶಾಂತಿಪುರ, ಬೋಚಿಕಟ್ಟೆ ಚಾಕಹಳ್ಳಿ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿರುವ ಸಂಬಂಧ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯಚರಣೆಯನ್ನು ಮುಂದುವರೆಸಲಾಗಿದೆ.
ಇಂದು ಬೆಳಿಗ್ಗೆ ಶಾಂತಿಪುರ, ಬೋಚಿಕಟ್ಟೆ ಗ್ರಾಮದ ಬಳಿ ಕೊಂಬಿಂಗ್ ಕಾರ್ಯಚರಣೆ ನಡೆಸಿದ್ದು, ಹಳೆ ಹೆಜ್ಜೆ ಗುರುತುಗಳು ಪತ್ತೆಯಾಗಿರುತ್ತದೆ.
ಹುಲಿ ಇರುವಿಕೆ ಖಚಿತಗೊಂಡ ಸ್ಥಳಗಳಲ್ಲಿ ಗ್ರಾಮಗಳಲ್ಲಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿ, ಹುಲಿ ಸೆರೆಗೆ ಟ್ರಾಪ್ ಕ್ಯಾಮರಾಗಳು, ನೆಟ್ವರ್ಕ್ ಕ್ಯಾಮರಾಗಳು, ಡೋನ್, ಬೋನ್, ಆನೆಗಳನ್ನ ಕಾರ್ಯಚರಣೆಗೆ ಬಳಸಿಕೊಳ್ಳಲಾಗ್ತಿದೆ. ಸುಳ್ಳು ವದಂತಿ, ನಕಲಿ ಫೋಟೋ ಶೇರ್ ಮಾಡದಂತೆ ಇಲಾಖೆ ಎಚ್ಚರಿಕೆ ನೀಡಿದೆ.
ಹುಲಿ-ಚಿರತೆ ಕಂಡು ಬಂದರೆ ಸಹಾಯವಾಣಿ ಸಂಖ್ಯೆ: 9481996026 ಅಥವಾ 1926ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
Kshetra Samachara
04/12/2024 09:46 pm