ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : HD ಕೋಟೆ : ಮೂರು ಹುಲಿ ಪ್ರತ್ಯಕ್ಷ - ಗ್ರಾಮಸ್ಥರಲ್ಲಿ‌ ಆತಂಕ.!

ಮೈಸೂರು : ಬೆಳ್ಳಂಬೆಳಗ್ಗೆಯೇ ಜಮೀನಿನಲ್ಲಿ ಮೂರು ಹುಲಿಗಳು ಅಡ್ಡಾಡುತ್ತಿದ್ದು ಗ್ರಾಮಸ್ಥರಲ್ಲಿ ಭಯವನ್ನ ಹುಟ್ಟಿಸಿದೆ. ಜಮೀನಿಗೆ ನೀರು ಹಾಯಿಸುವ ವೇಳೆ ರೈತ ರವಿಯನ್ನ ಕಂಡ ಹುಲಿ ಹಾಗೂ ಎರಡು ಮರಿಗಳು ತಂತಿಬೇಲಿ ಹಾರಿ ಪಕ್ಕದ ಜಮೀನಿಗೆ ತೆರಳಿರುವ ಘಟನೆ Hd ಕೋಟೆ ತಾಲೂಕಿನ ಚಾಕಹಳ್ಳಿ ಬಳಿ ನಡೆದಿದೆ.

ಈ ವಿಚಾರವನ್ನ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮುಟ್ಟಿಸಿದ್ದು ಮೈಸೂರಿನ ಹಿರಿಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ‌ 25 ಜನರ ತಂಡ ಇದೀಗಾ ಹುಲಿಗಳ ಸೆರೆಗೆ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು ಜಮೀನಿನಲ್ಲೇ ಹುಲಿ ಹಾಗೂ ಮರಿಗಳು ಬೀಡುಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.

Edited By : Abhishek Kamoji
Kshetra Samachara

Kshetra Samachara

04/12/2024 07:57 am

Cinque Terre

1.72 K

Cinque Terre

0

ಸಂಬಂಧಿತ ಸುದ್ದಿ