ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: 188 ವರ್ಷದ ಗರಡಿ ಮನೆಯ ಗೋಡೆ ಕುಸಿತ.!

ಮೈಸೂರು: ಫೆಂಗಲ್ ಚಂಡಮಾರುತದ ಎಫೆಕ್ಟ್‌ನಿಂದ ಮೈಸೂರಿನಲ್ಲಿ ನಿರಂತರ ಮಳೆಯಿಂದಾಗಿ ಎರಡು ಶತಮಾನದ ಅಂಚಿನಲ್ಲಿದ್ದ ಗರಡಿ ಮನೆಯ ಗೋಡೆ ಕುಸಿದಿದೆ. ಮೈಸೂರಿನ ಇರ್ವಿನ್ ರಸ್ತೆಯ ಉಸ್ತಾದ್ ಶ್ರೀನಿವಾಸಣ್ಣನವರ 188 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಗರಡಿ ಕುಸಿತ ಕಂಡಿದೆ.

1836ರಲ್ಲಿ ರಾಜರ ಸಹಾಯದಿಂದ ನಿರ್ಮಾಣಗೊಂಡಿದ್ದ ಈ ಗರಡಿ ಮಳೆಯಿಂದಾಗಿ ಶಿಥಿಲಗೊಂಡಿತ್ತು. ಪ್ರತಿದಿನವು ಇಲ್ಲಿ ಪೈಲ್ವಾನರು ಕಸರತ್ತು ನಡೆಸುತ್ತಿದ್ದು, ಎಡೆ ಬಿಡದೆ ಸುರಿದ ಮಳೆಯಿಂದಾಗಿ ಮಟ್ಟಿ ಮನೆಯ ಗೋಡೆ ಕುಸಿದಿದೆ. ಅಲ್ಲದೆ ಪಾರಂಪರಿಕ ಗರಡಿ ಮನೆ ಉಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Vijay Kumar
PublicNext

PublicNext

04/12/2024 10:07 pm

Cinque Terre

7.26 K

Cinque Terre

0

ಸಂಬಂಧಿತ ಸುದ್ದಿ