ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ : ಸುಭಾಷಿತ ನಗರದ ಸಮಸ್ಯೆ ನಿವಾರಣೆಗೆ ವಲಯ ಆಯುಕ್ತರಿಗೆ ಮನವಿ

ಸುರತ್ಕಲ್ : ಸುಭಾಷಿತ ನಗರದಲ್ಲಿರುವ ಮೂಲ‌ಭೂತ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ವತಿಯಿಂದ ಅಧ್ಯಕ್ಷ ರಮೇಶ್ ಶೆಟ್ಟಿಯವರ ನೇತೃತ್ವದಲ್ಲಿ ಸುರತ್ಕಲ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತೆ ವಾಣಿ ವಿ ಆಳ್ವ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು.

ವಲಯ ಆಯುಕ್ತೆ ವಾಣಿ ವಿ ಆಳ್ವರವರು ಅಸೋಸಿಯೇಶನ್ ನ‌ ಮನವಿಗೆ ಉತ್ತಮ ಸ್ಪಂದನೆ ನೀಡಿದರು. ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್ ನ ಪದಾಧಿಕಾರಿಗಳಾದ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಚಂದ್ರಶೇಖರ್ ಶೆಟ್ಟಿ, ನರಸಿಂಹ ಸುವರ್ಣ, ಚರಣ್ ಶೆಟ್ಟಿ, ಪ್ರೇಮನಾಥ್ ಹೆಗ್ಡೆ. ಬಾಳ ಜಗನ್ನಾಥ ಶೆಟ್ಟಿ, ಶ್ರವಣ ಕುಮಾರ್, ಪ್ರಭು ಕೃಷ್ಣನ್, ಶಾಂಭವಿ, ಹರಿಶ್ಚಂದ್ರ ರಾವ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

02/10/2022 09:35 am

Cinque Terre

964

Cinque Terre

0

ಸಂಬಂಧಿತ ಸುದ್ದಿ