ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66 ರ ಸುರತ್ಕಲ್ ಗೋವಿಂದದಾಸ ಕಾಲೇಜು ಬಳಿ ಸುಮಾರು 17.25 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿಟಿವಿ ಹಾಗೂ ಟಚ್ ಸ್ಕ್ರೀನ್ ಸಹಿತ ಆಧುನಿಕ ವ್ಯವಸ್ಥೆಗಳನ್ನು ಒಳಗೊಂಡ ಸ್ಮಾರ್ಟ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಚಾಲನೆ ನೀಡಿದರು.
ಈ ಬಸ್ ನಿಲ್ದಾಣದಲ್ಲಿ ವೈ ಫೈ ಚಾರ್ಜಿಂಗ್ ಪಾಯಿಂಟ್, ತಾತ್ಕಾಲಿಕ ವಿಶ್ರಾಂತಿಗೆ ಆಸನ, ಮಹಿಳೆಯರ, ಮಕ್ಕಳ ಸುರಕ್ಷತೆಗೆ ಅಲರ್ಟ್ ಅಲರಾಂ ಮತ್ತಿತರ ವ್ಯವಸ್ಥೆಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಯೋ ಶೌಚಾಲಯ ವ್ಯವಸ್ಥೆ ನಿರ್ಮಾಣ ನಡೆಯಲಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭ ಸ್ಥಳೀಯ ಮನಪಾ ಸದಸ್ಯರಾದ ವರುಣ್ ಚೌಟ, ಸ್ಥಾಯೀ ಸಮಿತಿ ಅಧ್ಯಕ್ಷೆ ನಯನ, ಕಾರ್ಪೋರೇಟರ್ ಗಳಾದ ಸರಿತಾ ಶಶಿಧರ್, ಲೋಕೇಶ್ ಬೊಳ್ಳಾಜೆ, ಬಿಜೆಪಿ ಪ್ರಮುಖರಾದ ಗಣೇಶ್ ಹೊಸಬೆಟ್ಟು, ವಿಠಲ ಸಾಲ್ಯಾನ್, ಭರತ್ ರಾಜ್ ಕೃಷ್ಣಾಪುರ, ಪುಷ್ಪರಾಜ್ ಮುಕ್ಕ, ಪೃಥ್ವಿರಾಜ್ ಶೆಟ್ಟಿ ಕಡಂಬೋಡಿ ಕೆ, ರಾಘವೇಂದ್ರ ರಾವ್, ಕೆ ಪಿ ಚಂದ್ರಶೇಖರ್, ಸುನಿಲ್ ಕುಳಾಯಿ ,ರಾಘವೇಂದ್ರ ಶೆಣೈ, ಉಮೇಶ್ ದೇವಾಡಿಗ ಇಡ್ಯಾ, ಓಂಪ್ರಕಾಶ್ ಶೆಟ್ಟಿಗಾರ್, ಪವಿತ್ರ ನಿರಂಜನ್, ರಮೇಶ್ ಅಳಪೆ, ಪ್ರಜ್ವಲ್ ಶೆಟ್ಟಿ, ಬೂತ್ ಅಧ್ಯಕ್ಷರಾದ ಲೋಕನಾಥ್, ತಿರುಮಲೇಶ್, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಮೂರ್ತಿ, ಮೂಡಾದ ಅಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
25/09/2022 04:08 pm