ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪದವಿನಂಗಡಿ: ಅಂಗನವಾಡಿ ದತ್ತು ಸ್ವೀಕಾರ

ಮಂಗಳೂರು: ನಗರದ ಹೊರವಲಯದ ಪದವಿನಂಗಡಿ ಬಳಿ ಭಾರತದ ಪ್ರಧಾನಿ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ ಆದರ್ಶ ಅಂಗನವಾಡಿ ಅಭಿಯಾನ ದ ಅಡಿಯಲ್ಲಿ ಪದವಿನಂಗಡಿಯ ಅಂಗನವಾಡಿಯನ್ನು ಮಂಗಳೂರು ನಗರ ಉತ್ತರ ಮಹಿಳಾ ಮೋರ್ಚಾ ದತ್ತು ಸ್ವೀಕಾರದ ಕಾರ್ಯಕ್ರಮವನ್ನು ಶಾಸಕರಾದ ಡಾ.ಭರತ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಸದಸ್ಯೆ ಅಶ್ವಿನಿ, ಜಿಲ್ಲೆಯ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಮಂಡಲದ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಧನಲಕ್ಷ್ಮಿ ಗಟ್ಟಿ, ಜಿಲ್ಲೆಯ ಕಾರ್ಯದರ್ಶಿ ಹಾಗೂ ಪ್ರಭಾರಿ ಪೂಜಾ ಪೈ ಹಾಗೂ ಮಂಗಳೂರು ಮಹಾ ಪೌರರಾದ ಜಯಾನಂದ್ ಅಂಚನ್, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೇವಂತಿ ಶ್ರೀಯಾನ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/09/2022 05:01 pm

Cinque Terre

922

Cinque Terre

0

ಸಂಬಂಧಿತ ಸುದ್ದಿ