ಮುಲ್ಕಿ: ತಾಲೂಕು ವ್ಯಾಪ್ತಿಯಲ್ಲಿ ಮಳೆ ಕ್ಷೀಣ ಕೊಂಡಿದ್ದು ಗದ್ದೆಗಳಲ್ಲಿ ಕೃಷಿ ಕಾರ್ಯ ಆರಂಭವಾಗಿದೆ.
ಮುಲ್ಕಿ ತಾಲೂಕು ವ್ಯಾಪ್ತಿಯ ಶಿಮಂತೂರು ಪರಿಸರ ಗದ್ದೆಗಳಲ್ಲಿ ನಾಟಿ ಕಾರ್ಯ ಆರಂಭವಾಗಿದ್ದು ಈ ಬಾರಿ ಕಾರ್ಮಿಕರ ಕೊರತೆಯಿಂದ ಉತ್ತರ ಕರ್ನಾಟಕದ ಗಂಗಾವತಿ ಮೂಲದ ಮಹಿಳೆಯರು ನಾಟಿ ಮಾಡುತ್ತಿರುವುದು ಕಾಣುತ್ತಿತ್ತು.
ಕಳೆದ ದಿನಗಳ ಹಿಂದೆ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದ ಕೃತಕ ನೆರೆ ಉಂಟಾಗಿ ಕೃಷಿ ಹಾನಿ ಸಂಭವಿಸಿದ್ದು ಕಾನೂನು ತೊಡಕಿರುವ ಕಾರಣ ಪರಿಹಾರ ಧನ ವಿತರಣೆಯಾಗಿಲ್ಲ ಎಂದು ಕೆಲ ಕೃಷಿಕರು ದೂರಿದ್ದು ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ
Kshetra Samachara
18/07/2022 07:31 pm