ಮುಲ್ಕಿ:ಭಾರೀ ಮಳೆಯಿಂದಾಗಿ ನೆರೆ ಪೀಡಿತವಾಗಿರುವ ಪಕ್ಷಿಕೆರೆ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ಯ , ಕುದುರು ಪ್ರದೇಶಗಳಿಗೆ ಕೆಮ್ರಾಲ್ ಗ್ರಾಮ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಭೇಟಿ ನೀಡಿದರು.
ಈ ಸಂದರ್ಭ ಸ್ಥಳೀಯರಾದ ಉಷಾ ಶೆಟ್ಟಿ ಮತ್ತು ಶೇಖರ ಪೂಜಾರಿ ಉಲ್ಯ ಮತ್ತು ಭಾರಿ ಮಳೆ ಮತ್ತು ನೆರೆಯಿಂದ ಮನೆಗೆ ಹಾಗೂ ಕೃಷಿ ಹಾನಿ ಬಗ್ಗೆ ಅಧ್ಯಕ್ಷರೊಡನೆ ಮನವಿ ಮಾಡಿದರು.
ಈ ಸಂದರ್ಭ ಅಧ್ಯಕ್ಷರು ಸೂಕ್ತ ಪರಿಹಾರ ದೊರಕಿಸಿ ಕೊಳ್ಳುವುದಾಗಿ ಭರವಸೆ ನೀಡಿದರು. ಪಂಚಾಯತ್ ಸದಸ್ಯರಾದ ಜಾಕ್ಸನ್, ನವೀನ್ ಸಾಲಿಯಾನ್ ರಾಜೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಭಾನುವಾರ ರಾತ್ರಿ ಮಳೆಯಾಗಿದ್ದರಿಂದ ನಂದಿನಿ ನೀರಿನ ಮಟ್ಟ ಏರಿಕೆಯಾಗಿ ನೆರೆ ನೀರು ಬಂದಿದ್ದು ಸೋಮವಾರ ಮಳೆ ತಗ್ಗಿದ್ದು ಬೆಳಗಿನ ಜಾವ ಸ್ವಲ್ಪ ಮಟ್ಟಿಗೆ ನೆರೆ ನೀರು ಇಳಿದಿದೆ.
Kshetra Samachara
11/07/2022 12:10 pm