ಮುಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಬೆವೂರು ರಾಜ್ಯ ಹೆದ್ದಾರಿ ಬಳಿ ಜಲಜೀವನ್ ಮೆಷೀನ್ ಕುಡಿಯುವ ನೀರಿನ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದ್ದು ಕೃತಕ ನೆರೆ ಉಂಟಾಗಿದೆ.
ಜಲಜೀವನ್ ಮೆಷಿನ್ ಕಾಮಗಾರಿ ಮಳೆಗಾಲದಲ್ಲಿ ಕೂಡ ನಡೆಯುತ್ತಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ಕಾಮಗಾರಿಗೆ ತೋಡಿದ ಮಣ್ಣನ್ನು ಸಮೀಪದ ಗದ್ದೆಯಲ್ಲಿ ಹಾಕಿದ್ದು ಕೃತಕ ನೆರೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿ ಕಿಲ್ಪಾಡಿ ಪಂಚಾಯಿತಿಗೆ ದೂರು ನೀಡಿದ್ದಾರೆ.
ಕೂಡಲೆ ಸ್ಥಳಕ್ಕೆ ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ ಪಡಂಗ ಹಾಗೂ ಪಿ ಡಿ ಓ ಪೂರ್ಣಿಮಾ ಭೇಟಿ ನೀಡಿ ಪರಿಶೀಲಿಸಿ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು ಜೆಸಿಬಿ ಮೂಲಕ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿದ್ದಾರೆ. ಹಾಗೂ ಗುತ್ತಿಗೆದಾರರು ಗದ್ದೆಗೆ ಹಾಕಿದ ಮಣ್ಣನ್ನು ತೆರವುಗೊಳಿಸಬೇಕೆಂದು ಸೂಚನೆ ನೀಡಿದ್ದಾರೆ.
ಮಳೆಗಾಲದಲ್ಲಿ ರಾಜ್ಯ ಹೆದ್ದಾರಿ ಬದಿ ಜಲಜೀವನ್ ಮೆಷೀನ್ ಕಾಮಗಾರಿ ನಡೆಯುತ್ತಿದ್ದು ಹೆದ್ದಾರಿ ಕುಸಿತದ ಭೀತಿ ಎದುರಾಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.
Kshetra Samachara
01/07/2022 11:41 am