ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬುಧವಾರ ಸುರಿದ ಭಾರಿ ಮಳೆಗೆ ಕೆರೆಯಾಗಿದ್ದು ಹೆದ್ದಾರಿಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡಬೇಕಾಯಿತು.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ವಾದ ಬಳಿಕ ಸೂಕ್ತ ಸರ್ವಿಸ್ ರಸ್ತೆ ಹಾಗೂ ಒಳಚರಂಡಿ ಅವ್ಯವಸ್ಥೆ ಯಿಂದ ಹಳೆಯಂಗಡಿ ಜಂಕ್ಷನ್ ಪ್ರತಿ ಮಳೆಗಾಲದಲ್ಲಿ ಕೆಸರು ಮಾಯವಾಗುತ್ತಿದ್ದು ಇದಕ್ಕೆ ಸ್ಪಂದಿಸಬೇಕಾದ ಹೆದ್ದಾರಿ ಇಲಾಖೆ ಹಾಗೂ ಸಂಸದರು ಮೌನವಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೆಯಂಗಡಿ ಜಂಕ್ಷನ್ ಸದಾ ಜನನಿಬಿಡ ಪ್ರದೇಶವಾಗಿದ್ದು ಕಿನ್ನಿಗೋಳಿ-ಕಟೀಲು, ಇತ್ತ ಮಂಗಳೂರು ಅತ್ತ ಮುಲ್ಕಿ ಕಡೆಗೆ ಸದಾ ವಾಹನ ಸಂಚಾರ ಬ್ಯೂಸಿ ಯಾಗಿರುತ್ತದೆ. ಹೆದ್ದಾರಿ ಬದಿಯಲ್ಲಿ ಮಳೆ ನೀರು ನಿಲ್ಲುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ಬುಧವಾರ ಸುರಿದ ಭಾರಿ ಮಳೆಗೆ ಹೆದ್ದಾರಿ ಕೆರೆಯಂತಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಮಳೆಗಾಲ ಶುರುವಾಗುವ ಮೊದಲೇ ಸೂಕ್ತ ಸರ್ವಿಸ್ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
11/05/2022 07:12 pm