ಮುಲ್ಕಿ:ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಮುಲ್ಕಿ ಹೊಟೇಲ್ ಆಧಿದನ್ ಸಭಾಂಗಣದಲ್ಲಿ ಅಟೋ ರಿಕ್ಷಾ ಚಾಲಕ-ಮಾಲಕರ ಮಕ್ಕಳಿಗೆ 10 ನೇ ವರ್ಷದ ಉಚಿತ ಪುಸ್ತಕ ವಿತರಣಾ ಸಮಾರಂಭ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಲೆಕಾಡಿ ಶ್ರೀ ಕಾಳಿಕಾಂಬ ದೇವಸ್ಥಾನದ ಮಾಜಿ ಮೊಕ್ತೇಸರ ,ನಿವೃತ್ತ ಮುಖ್ಯೋಪಾಧ್ಯಾಯ ಅಚ್ಯುತ ಆಚಾರ್ಯ ವಹಿಸಿ ಮಾತನಾಡಿ ಈಗಿನ ಕಾಲದ ಜೀವನ ದುಬಾರಿಯಾಗಿದ್ದು ಹೆತ್ತವರ ಪರಿಶ್ರಮಕ್ಕೆ ಸ್ಪಂದಿಸಿ ವಿದ್ಯಾರ್ಥಿಗಳು ಸಾಧಕರಾಗಬೇಕು ಎಂದರು.
ಅತಿಕಾರಿಬೆಟ್ಟು ಗ್ರಾ ಪಂ ಅಧ್ಯಕ್ಷ ಮನೋಹರ್ ಕೋಟ್ಯಾನ್ ಮಾತನಾಡಿ ಮುಲ್ಕಿ ಆಟೋ ಚಾಲಕರು ಊರಿನ ರಾಯಭಾರಿಗಳಾಗಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಸಹಿತ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಉದ್ಯಮಿ ಪ್ರಭೋದ್ ಕುಡ್ವ, ಮೂಲ್ಕಿ ನ ಪಂ ಮಾಜೀ ಅಧ್ಯಕ್ಷ ಸುನೀಲ್ ಆಳ್ವ, ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಗೌರವಾಧ್ಯಕ್ಷ ಭಾಸ್ಕರ ಹೆಗ್ಡೆ, ಅಧ್ಯಕ್ಷ ಸಂತೋಷ್ ಶೆಟ್ಟಿ,ಮಾಜೀ ಅಧ್ಯಕ್ಷ ನಾಗರಾಜ ಕೊಲಕಾಡಿ, ಮೋಹನ್ ಕುಬೆವೂರು ಮುಖ್ಯ ಆತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ನಿವೃತ್ತ ಶಿಕ್ಷಕ ಅಚ್ಚುತ ಮಾಸ್ಟರ್ ಕೊಲಕಾಡಿ ರವರನ್ನು ಗೌರವಿಸಲಾಯಿತು. ಸತೀಶ್ ಮಾನಂಪಾಡಿ ಸ್ವಾಗತಿಸಿದರು, ಶ್ರೀನಿವಾಸ್ ಕೊಲಕಾಡಿ ನಿರೂಪಿಸಿ ವಂದಿಸಿದರು.
Kshetra Samachara
10/05/2022 06:26 pm