ಸುರತ್ಕಲ್: ಮಂಗಳೂರು ನಗರ ಉತ್ತರದ ಕೃಷ್ಣಾಪುರ ವಾರ್ಡ್ 4 ರಲ್ಲಿ ಸುಮಾರು 33 ಲಕ್ಷ 80 ಸಾವಿರ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ ವೈ.ಭರತ್ ಶೆಟ್ಟಿಯವರು ಗುದ್ದಲಿ ಪೂಜೆ ಹಾಗೂ ಪೂರ್ಣಗೊಂಡ ಕಾಮಗಾರಿಯ ಉದ್ಘಾಟನೆಯನ್ನು ನೆರವೇರಿಸಿದರು.
ವಾರ್ಡ್4 ಕೃಷ್ಣಾಪುರದ ನೈತಂಗಡಿ ಬಳಿ ರಸ್ತೆ ಕಾಂಕ್ರೀಟ್ ವಿಸ್ತರಣೆ ಕಾಮಗಾರಿಗೆ 5 ಲಕ್ಷ ರೂಪಾಯಿ ಮತ್ತು ನೂತನ ಚರಂಡಿ ನಿರ್ಮಾಣ ಕಾಮಗಾರಿಗೆ 8 ಲಕ್ಷ ರೂ,4ನೇ ಬ್ಲಾಕ್ ನಲ್ಲಿ ಚರಂಡಿ ನಿರ್ಮಾಣಕ್ಕೆ 8 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ ಡಾ.ವೈ.ಭರತ್ ಶೆಟ್ಟಿಯವರು ಗುದ್ದಲಿ ಪೂಜೆ ಹಾಗೂ ಸುಮಾರು 12 ಲಕ್ಷ 80 ಸಾವಿರ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆಯ ಉಧ್ಘಾಟನೆಯನ್ನು ನೆರವೇರಿಸಿದರು.
ಸ್ಥಳೀಯ ಮ.ನ.ಪಾ ಸದಸ್ಯೆ ಲಕ್ಷ್ಮೀ ಶೇಖರ್ ದೇವಾಡಿಗ ,ಉತ್ತರ ಮಂಡಲದ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಪಾಲಿಕೆ ನಾಮ ನಿರ್ದೇಶಿತ ಸದಸ್ಯ ಪ್ರಶಾಂತ ಮುಡೈಕೋಡಿ, ಮುಖಂಡರಾದ ಪ್ರಶಾಂತ್ ಆಚಾರ್ಯ, ಲಕ್ಷ್ಮೀಶ ದೇವಾಡಿಗ, ಸದಾನಂದ ಸುನಿಲ್, ಶೇಖರ್ ದೇವಾಡಿಗ, ಜಗದೀಶ, ಸತೀಶ ಸಾಲ್ಯಾನ್, ಸುಧಾಕರ ಶೆಟ್ಟಿ, ಹೇಮಾವತಿ ಕೋಟ್ಯಾನ್, ಪ್ರವೀಣ್, ಶಿವಪ್ರಸಾದ್ ಬೊಳ್ಳಾಜೆ, ಶರತ್, ರಕ್ಷಿತ್ ಹಾಗೂ ಶಕ್ತಿ ಕೇಂದ್ರದ ಪ್ರಮುಖರು, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
Kshetra Samachara
03/05/2022 01:04 pm