ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದು ನಗರೋತ್ಥಾನ ಯೋಜನೆಯಲ್ಲಿ ಈಗಾಗಲೇ ಐದು ಕೋಟಿ ಮಂಜೂರಾಗಿದ್ದು ಜನರ ಕುಂದುಕೊರತೆಗಳ ಬಗ್ಗೆ ಮನವಿ ನೀಡಲು ಮುಲ್ಕಿ ,ಮೂಡುಬಿದಿರೆ ,ಬಜಪೆ ಹಾಗೂ ಕಿನ್ನಿಗೊಳಿಯಲ್ಲಿ ವಾರದ ಒಂದು ದಿನಗಳಲ್ಲಿ ಲಭ್ಯವಿದ್ದೇನೆ ಎಂದು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಆವರಣದಲ್ಲಿ ಕಾರ್ಯಾರಂಭಗೊಂಡ ನೂತನ ಶಾಸಕರ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಜಿ.ಪಂ. ಮಾಜಿ ಸದಸ್ಯ ಈಶ್ವರ್ ಕಟೀಲು, ಮೂಲ್ಕಿ ನ ಪಂ ಅಧ್ಯಕ್ಷ ಸುಭಾಶ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ತಾ.ಪಂ.ಮಾಜೀ ಸದಸ್ಯರಾದ ದಿವಾಕರ ಕರ್ಕೇರ, ಮಾಜಿ ಅಧ್ಯಕ್ಷರಾದ ಫಿಲೋಮಿನಾ ಸಿಕ್ಸರಾ, ದೇವಪ್ರಸಾದ್ ಪುನರೂರು, ಮುಖ್ಯಾಧಿಕಾರಿ ಸಾಯಿಶ್ ಚೌಟ ಮತ್ತಿತರರು ಉಪಸ್ಥಿತರಿದ್ದರು
Kshetra Samachara
11/01/2022 12:27 pm