ಸುರತ್ಕಲ್: ಮಂಗಳೂರು ಉತ್ತರ ಶಾಸಕ ಡಾ. ವೈ.ಭರತ್ ಶೆಟ್ಟಿ ಅವರ ಮುತುವರ್ಜಿಯಿಂದ ಎರಡನೇ ವಾರ್ಡ್ ನಲ್ಲಿ 2.5 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸೋಮವಾರ ಗುದ್ದಲಿ ಪೂಜೆ ನಡೆಯಲಿದೆ ಎಂದು ವಾರ್ಡ್ ಕಾರ್ಪೋರೇಟರ್ ಶ್ವೇತಾ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈಗಾಗಲೇ ವಾರ್ಡ್ ನಲ್ಲಿ ಒಂದು ಹಂತದಲ್ಲಿ 1.5 ಕೋಟಿ ರೂ. ಹಾಗೂ ಮತ್ತೊಂದು ಹಂತದಲ್ಲಿ 70 ಲಕ್ಷ ರೂ. ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾರ್ಯ ನಡೆಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಬಳಸಿಕೊಂಡು ಅಭಿವೃದ್ಧಿ ನಡೆಯಲಿದೆ. 2.5 ಕೋಟಿ ರೂ. ಅನುದಾನ ಬಳಸಿಕೊಂಡು ಮಧ್ಯ ಕೊರಗರ ಕಾಲೋನಿಗೆ 1 ಕೋಟಿ 45 ಲಕ್ಷ ರೂ., ಸುರತ್ಕಲ್ ವೆಂಕಟರಮಣ ಕಾಲೋನಿ ರಸ್ತೆ ಅಭಿವೃದ್ಧಿಗೆ 14 ಲಕ್ಷ ರೂ., ದುರ್ಗಾಂಬಾ ದೇವಸ್ಥಾನ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ, ಚೊಕ್ಕಬೆಟ್ಟು ಬಳಿ ರಸ್ತೆ ಅಭಿವೃದ್ಧಿಗೆ 5 ಲಕ್ಷ, ಮಲ್ಲಮಾರ್ ಬಳಿ ಚರಂಡಿ ನಿರ್ಮಾಣಕ್ಕೆ 5 ಲಕ್ಷ ರೂ., ಪಡ್ರೆ ಗುತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ, ಅರಂತಬೆಟ್ಟು ಚರಂಡಿ ನಿರ್ಮಾಣಕ್ಕೆ 5 ಲಕ್ಷ, ಸದಾಶಿವ ಶೆಟ್ಟಿ ನಗರ ನಾಲ್ಕನೇ ಅಡ್ಡರಸ್ತೆ ಕಾಮಗಾರಿಗೆ 5 ಲಕ್ಷ ರೂ., ಬಾಳಿಕೆ ಕೋಡ್ದಬ್ಬು ದೈವಸ್ಥಾನ ಬಳಿ ರಸ್ತೆ ಕಾಮಗಾರಿಗೆ 3 ಲಕ್ಷ ರೂ., ಚೊಕ್ಕಬೆಟ್ಟು ಸತ್ಯನಾರಾಯಣ ಭಜನಾ ಮಂದಿರ ಕಟ್ಟಡ ಕಾಮಗಾರಿಗೆ 3 ಲಕ್ಷ, ಸುಭಾಷಿತ ನಗರ ರಸ್ತೆ ಅಭಿವೃದ್ಧಿಗೆ 3 ಲಕ್ಷ, ತಡಂಬೈಲ್ ಕುಲಾಲ ಭವನ ಚರಂಡಿ ಕಾಮಗಾರಿಗೆ 2.5 ಲಕ್ಷ, ಮುಕ್ಕ ಸತ್ಯಧರ್ಮ ದೇವಸ್ಥಾನ ಬಳಿ ಇಂಟರ್ ಲಾಕ್ ಕಾಮಗಾರಿಗೆ 2.5 ಲಕ್ಷ, ಮಾರಿಗುಡಿ ಇಂಟರ್ ಲಾಕ್ ಕಾಮಗಾರಿಗೆ 2.5 ಲಕ್ಷ ರೂ., ಮುಂಚೂರು ಕೃಷ್ಣನಗರ ರಸ್ತೆ ಅಭಿವೃದ್ಧಿಗೆ 3 ಲಕ್ಷ, ಅರಂತಬೆಟ್ಟು ರಸ್ತೆ ಅಭಿವೃದ್ಧಿಗೆ 2 ಲಕ್ಷ ಮೀಸಲಿಡಲಾಗಿದೆ" ಎಂದು ಶ್ವೇತಾ ಪೂಜಾರಿ ಹೇಳಿದರು.
ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯ ಸೂರಜ್ ಹೋಟೆಲ್ ಬಳಿ ಚರಂಡಿ ಸಮಸ್ಯೆಯಿದ್ದು ಸುಭಾಷಿತ ನಗರದ ರಾಜಕಾಲುವೆಗೆ ಸೇರಿಸುವ ಪ್ರಸ್ತಾವನೆ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎರಡನೇ ವಾರ್ಡ್ ಪ್ರಮುಖ ಸುರೇಂದ್ರ ಸುವರ್ಣ, ಸುಧಾಕರ ಉಪಸ್ಥಿತರಿದ್ದರು.
Kshetra Samachara
08/01/2022 05:30 pm