ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಪುತ್ತೂರು ಜಾತ್ರೆಯಲ್ಲಿ ಅನ್ಯಧರ್ಮಿಯ ಆಟೋಗಳಿಗೆ ನೋ ಎಂಟ್ರಿ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವವು ಎಪ್ರಿಲ್ 10 ರಿಂದ 20ರವರೆಗೆ ನಡೆಯಲಿದೆ.

ಈ ಬಾರಿ ಅನ್ಯಧರ್ಮಿಯರು ಜಾತ್ರೋತ್ಸವದಲ್ಲಿ ವ್ಯಾಪಾರ-ವ್ಯವಹಾರಕ್ಕೆ ನಿಶೇಧ ಹೇರಲಾಗಿದೆ. ಈ ನಿಷೇಧದ ಮುಂದುವರಿದ ಭಾಗವಾಗಿ ಜಾತ್ರೋತ್ಸವಕ್ಕೆ ಬರುವ ಭಕ್ತಾಧಿಗಳು ಹಿಂದೂ ಆಟೋ ಚಾಲಕರ ಆಟೋದಲ್ಲೇ ಬರಬೇಕು ಎಂದು ಹಿಂದೂ ಜಾಗರಣ ವೇದಿಕೆ ಭಕ್ತಾಧಿಗಳಲ್ಲಿ ಮನವಿ ಮಾಡಿದೆ.

ಈ ಸಂಬಂಧ ಪುತ್ತೂರಿನ ಆಟೋ ಚಾಲಕರಿಗೆ ಭಗವಧ್ವಜವನ್ನು ವಿತರಣೆ ಮಾಡುವ ಕೆಲಸವನ್ನು ಈಗಾಗಲೇ ವೇದಿಕೆಯ ಕಾರ್ಯಕರ್ತರು ಆರಂಭಿಸಿದ್ದಾರೆ.

ಜಾತ್ರೆಯ ನೆಪದಲ್ಲಿ ಅನ್ಯಧರ್ಮಿಯರು ಹಿಂದೂ ಹೆಣ್ಣುಮಕ್ಕಳನ್ನು ಮೋಸದ ಜಾಲದಲ್ಲಿ ಸಿಲುಕಿಸುವ ಕಾರ್ಯದಲ್ಲಿ ನಿರತರಾಗುತ್ತಾರೆ ಎಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆ ಈ ಬಾರಿ ಹಿಂದೂಗಳ ಆಟೋದಲ್ಲಿ ಮಾತ್ರವೇ ಭಕ್ತಾಧಿಗಳು ಜಾತ್ರೆಗೆ ಆಗಮಿಸಬೇಕು. ಕೇಸರಿ ಧ್ವಜವಿರುವ ಆಟೋದಲ್ಲೇ ಸಂಚರಿಸುವ ಮೂಲಕ ಹಿಂದೂ ಬಡ ಆಟೋ ಚಾಲಕರಿಗೆ ಸಹಾಯ ಮಾಡಬೇಕು ಎನ್ನುವ ವಿಚಾರವನ್ನೂ ಹಿಂಜಾವೇ ತನ್ನ ಅಭಿಯಾನದಲ್ಲಿ ಬಳಸಿಕೊಂಡಿದೆ.

Edited By :
PublicNext

PublicNext

09/04/2022 02:59 pm

Cinque Terre

42.58 K

Cinque Terre

17

ಸಂಬಂಧಿತ ಸುದ್ದಿ