ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:"ಪರಿಸರದ ಜೊತೆಗೆ ನೀರಿನ ಸದ್ಭಳಕೆ ಮಾಡದೇ ಇದ್ದರೆ ಪಶ್ಚಾತ್ತಾಪ ದಿನ ಬರಲಿವೆ"

ಕಟೀಲು : ಕುಡಿಯುವ ನೀರಿಗೂ ದುಡ್ಡು ಕೊಡುವ ದಿನಗಳಲ್ಲಿದ್ದೇವೆ. ಪರಿಸರದ ಜೊತೆಗೆ ನೀರಿನ ಇಂಗಿಸುವಿಕೆ, ಮಿತ ಬಳಕೆ, ಸದ್ಭಳಕೆ ಮಾಡದೇ ಇದ್ದರೆ ದೊಡ್ಡ ಪಶ್ಚಾತ್ತಾಪ ಪಡುವ ದಿನಗಳೂ ಬರಲಿವೆ ಎಂದು ಮಂಗಳೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ ಬಾಳ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ಕಟೀಲು ಸಮೂಹ ಶಿಕ್ಷಣ ಸಂಸ್ಥೆಗಳ ಪರಿಸರ ಸಂಘದಲ್ಲಿ ನಡೆದ ಪರಿಸರ ಮತ್ತು ಜಲಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡಿದರು.

ಪ್ರಾಂಶುಪಾಲೆ ಕುಸುಮಾವತಿ, ಉಪಪ್ರಾಚಾರ‍್ಯೆ ಸೋಮಪ್ಪ ಅಲಂಗಾರು, ಚಂದ್ರಶೇಖರ ಭಟ್ ಮತ್ತಿತರರಿದ್ದರು. ಶಿಕ್ಷಕ ಹರೀಶ್ ಸ್ವಾಗತಿಸಿದರು. ಅನಿಲ್ ನಿರೂಪಿಸಿದರು. ಸುಜಯ ಭಟ್ ವಂದಿಸಿದರು. 

Edited By : PublicNext Desk
Kshetra Samachara

Kshetra Samachara

20/07/2022 07:42 pm

Cinque Terre

1.54 K

Cinque Terre

0

ಸಂಬಂಧಿತ ಸುದ್ದಿ