ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ, ಸರಕಾರಿ ಶಾಲಾ ಆವರಣವನ್ನು ಹಸಿರುಮಯವನ್ನಾಗಿಸುವ ಮತ್ತು ಮಕ್ಕಳಿಗೆ ಎಳವೆಯಲ್ಲಿಯೇ ಸಾವಯವ ಕೃಷಿಯ ಬಗ್ಗೆ ತಿಳಿಸುವ ಉದ್ದೇಶದಿಂದ ತೋಕೂರು ಹಿರಿಯ ಪ್ರಾರ್ಥಮಿಕ ಹಿಂದುಸ್ಥಾನಿ ಶಾಲಾ ಹೊರಾಂಗಣದಲ್ಲಿ ವನಮಹೋತ್ಸವ,ಪೌಷ್ಟಿಕ ಕೈತೋಟ ನಿರ್ಮಾಣ ಮತ್ತು ನಿರ್ವಹಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಪೌಷ್ಟಿಕ ಕೈ ತೋಟವನ್ನು ಸರಿಯಾದ ಕ್ರಮದಲ್ಲಿ ನಿರ್ಮಾಣ ಮಾಡುವ ಪದ್ಧತಿಯನ್ನು ಮತ್ತು ಮುಂದಿನ ದಿನಗಳಲ್ಲಿ ಕೈತೋಟವನ್ನು ನಿರ್ವಹಣೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ಮುಲ್ಕಿ-ಸುರತ್ಕಲ್ ವಲಯದ ಕೃಷಿ ಅಧಿಕಾರಿ ಅಬ್ದುಲ್ ಬಷೀರ್ ಮಾಹಿತಿ ನೀಡಿದರು.
ಬಳಿಕ ಸದಸ್ಯರು ಮಣ್ಣು, ಮರಳು ಮತ್ತು ಗೊಬ್ಬರದ ಮಿಶ್ರಣದಲ್ಲಿ ವಿವಿಧ ಬಗೆಯ ಔಷಧೀಯ ಸಸ್ಯಗಳು, ತರಕಾರಿ ಗಿಡಗಳನ್ನು ನೆಟ್ಟರು.
ಈ ಸಂದರ್ಭ ಶಾಲೆಯ ಶಿಕ್ಷಕಿ ಸಿಲ್ವಿಯ ಡಿ.ಸೋಜ, ಪಡುಪಣಂಬೂರುಗ್ರಾ ಪಂ ಸದಸ್ಯ ಮೋಹನ್ ದಾಸ್,ಸಂತೋಷ್ ಕುಮಾರ್,ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಯೋಗೀಶ್ ಕೋಟ್ಯಾನ್,ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ದೇವಾಡಿಗ ಪದಾಧಿಕಾರಿಗಳು ಉಪಸ್ಥಿತರಿದ್ದರು
Kshetra Samachara
29/06/2022 07:44 am