ಮುಲ್ಕಿ: ಮಳೆರಾಯನ ಕಣ್ಣಾಮುಚ್ಚಾಲೆಯಿಂದ ರೈತ ಸಂಕಷ್ಟಕೊಳಗಾಗಿದ್ದಾನೆ, ಜೂನ್ ಅಂತ್ಯದಲ್ಲಿ ಹೆಚ್ಚಿನ ರೈತರ ಭತ್ತದ ನಾಟಿ ಕಾರ್ಯ ಮುಗಿಯಬೇಕಾಗಿದ್ದು, ಶೇಕಡ 90 ಜನರ ನಾಟಿ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ.
ಗದ್ದೆಗಳಿಗೆ ಗೊಬ್ಬರ ಹಾಕಲಾಗಿದ್ದು ಹೆಚ್ಚಿನ ಗದ್ದೆಗಳು ಉಳುಮೆಯೇ ಪ್ರಾರಂಭವಾಗಿಲ್ಲ, ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ನಾಟಿ ಕಾರ್ಯಕ್ಕೆ ಸಿದ್ದರಾಗಿದ್ದರೂ ಮಳೆ ಇಲ್ಲದೆ ನಾಟಿ ಕಾರ್ಯವೇ ಪ್ರಾರಂಭವಾಗಿಲ್ಲ. ಹಿಗೆಯೇ ಮುಂದುವರಿದರೆ ಸಮಸ್ಯೆ ಹೆಚ್ಚಾಗಲಿದೆ ಎನ್ನುತ್ತಾರೆ ರೈತರು.
Kshetra Samachara
28/06/2022 10:49 am