ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯದಲ್ಲಿ ಭಾರೀ ಮಳೆ; ಹಲವಡೆ ಹಾನಿ

ಸುಳ್ಯ: ನಿನ್ನೆ ಸುರಿದ ಭಾರೀ ಗಾಳಿ‌ಮಳೆಗೆ ಮರ್ಕಂಜದ ತೇರ್ಥಮಜಲು ಎಂಬಲ್ಲಿ ಅಂಗಡಿಯೊಂದರ ಮುಭಾಗದ ಶೀಟು ಹಾರಿ ಹೋಗಿ ಹಾನಿ ಸಂಭವಿಸಿದೆ. ಅಲ್ಲದೆ ಕಾಯಿಪಳ್ಳ ಎಂಬಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ರಸ್ತೆಯಲ್ಲಿ‌ ಸಂಚಾರ ವ್ಯತ್ಯಯ ವಾಗಿದೆ. ಕೆಲವು‌ ಕಡೆಗಳಲ್ಲಿ ಕೃಷಿಗೂ ಹಾನಿ ಸಂಭವಿಸಿದೆ.

ಅಲ್ಲದೇ ತೇರ್ಥಮಜಲು ಬಳಿಯ ಆನಂದ ಗೌಡ ಎಂಬವರ ತೋಟದಲ್ಲಿ ನೂರಕ್ಕೂ ಹೆಚ್ಚು ಅಡಿಕೆ ಮರಗಳು ಉರುಳಿದೆ. ರಬ್ಬರ್ ಗಿಡಗಳು ಮುರಿದು ಬಿದ್ದಿದೆ. ದೊಡ್ಡತೋಟ ಮರ್ಕಂಜ ರಸ್ತೆಯ ಹೈದಂಗೂರು ಎಂಬಲ್ಲಿಯೂ ರಸ್ತೆಗೆ ಮರ ಉರುಳಿದೆ.

ಮರ್ಕಂಜ ಭಾಗದ ಕಡೆಗಳಲ್ಲಿ ಅಡಿಕೆ ಮರಗಳು, ರಬ್ಬರ್ ಮರಗಳು ಬಾಳೆ ಗಿಡಗಳು ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ.

ಅಲ್ಲದೇ ದೋಳ ಪ್ರಮೋದ್ ರವರ ಜಾಗದ ರಬ್ಬರ್ ಮರ ಮುರಿದು ಮನೆಯ ಸನ್ ಶೆಡ್ ಹಂಚಿಗೆ ಹಾನಿಯಾಗಿದೆ.

Edited By :
Kshetra Samachara

Kshetra Samachara

27/04/2022 09:25 pm

Cinque Terre

1.93 K

Cinque Terre

0

ಸಂಬಂಧಿತ ಸುದ್ದಿ