ಮುಲ್ಕಿ: ಮುಲ್ಕಿ ತಾಲ್ಲೂಕು ವ್ಯಾಪ್ತಿಯಲ್ಲಿ ಸಂಜೆಯಾಗುತ್ತಲೇ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿದಿದೆ. ಸಂಜೆ 7 ಗಂಟೆ ಸುಮಾರಿಗೆ ಏಕಾಏಕಿ ಮಳೆ ಸುರಿದಿದ್ದು ಹೆದ್ದಾರಿಯಲ್ಲಿ ವಾಹನ ಸವಾರರು, ಕೆಲಸ ಬಿಟ್ಟು ಮನೆಕಡೆ ತೆರಳುವವರು ಪರದಾಡಬೇಕಾಯಿತು.
ಮಳೆಯ ನಡುವೆ ಗುಡುಗು-ಮಿಂಚು ಜೋರಾಗಿದ್ದು ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಅಸ್ತವ್ಯಸ್ತಗೊಂಡಿದೆ.
ಬಾರಿ ಮಳೆಗಾಳಿಗೆ ಕುಬೆವೂರು ರೈಲ್ವೆ ಮೇಲ್ಸೇತುವೆ ಶಿಮಂತೂರು ದ್ವಾರದ ಬಳಿ ಮರವೊಂದು ವಿದ್ಯುತ್ ತಂತಿಗೆ ಬಿದ್ದಿದೆ. ಸ್ಥಳಕ್ಕೆ ಮುಲ್ಕಿ ಮೆಸ್ಕಾಂ ಸಿಬ್ಬಂದಿ ಧಾವಿಸಿದ್ದಾರೆ.
ಮುಲ್ಕಿ ತಾಲೂಕು ವ್ಯಾಪ್ತಿಯ ಹಳೆಯಂಗಡಿ ,ಕಿನ್ನಿಗೋಳಿ, ಬಳಕುಂಜೆ, ಪಕ್ಷಿಕೆರೆ ಅತಿಕಾರಿಬೆಟ್ಟು ಪರಿಸರದಲ್ಲಿ ಸಂಜೆಯಾಗುತ್ತಲೇ ಮಳೆ ಸುರಿದಿದ್ದು ವಿಪರೀತ ಸೆಕೆ ಯಿಂದ ಕಂಗೆಟ್ಟಿರುವ ಜನರಿಗೆ ತಂಪಿನ ವಾತಾವರಣ ಸೃಷ್ಟಿಯಾಗಿದೆ.ಆದರೆ ಭಾರೀ ಮಳೆಯಿಂದ ಯಕ್ಷಗಾನ, ನೇಮೋತ್ಸವ ಸಹಿತ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದೆ.
Kshetra Samachara
09/04/2022 09:47 pm