ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಉಳ್ಳಾಲ ಕಡಲ ಕಿನಾರೆಯಲ್ಲಿ ಕಡಲ ಹಂದಿ ಮೃತದೇಹ ಪತ್ತೆ

ಮಂಗಳೂರು: ಉಳ್ಳಾಲ ಮೊಗವೀರಪಟ್ಣದ ಸಮುದ್ರ ಕಿನಾರೆಯಲ್ಲಿ ಕಡುನೀಲಿ ಬಣ್ಣದ ತಿಮಿಂಗಿಲ ಮಾದರಿಯ ಬೃಹತ್ ಕಡಲ ಹಂದಿಯ ಕಳೇಬರ ಪತ್ತೆಯಾಗಿದೆ.

ಸಮುದ್ರದಲ್ಲಿರುವ ಕಡಲ ಹಂದಿಗಳು ಸಾಧಾರಣವಾಗಿ ತಿಮಿಂಗಿಲಗಳನ್ನೇ ಹೋಲುತ್ತವೆ. ತಿಮಿಂಗಿಲದ್ದೇ ಒಂದು ಪ್ರಭೇದವಾಗಿದ್ದು, ಸ್ಥಳೀಯರು ಆಡುಭಾಷೆಯಲ್ಲಿ ಕಡಲ ಹಂದಿ(ಕಡಲ ಪಂಜಿ) ಎನ್ನುತ್ತಾರೆ.

ಸ್ಥಳೀಯ ಮೀನುಗಾರರ ಪ್ರಕಾರ ಇದು ತಿಮಿಂಗಿಲ ಅಲ್ಲ, ಕಡಲ ಹಂದಿ. ಸುಮಾರು ಹತ್ತು ಫೀಟ್ ಉದ್ದವಿದೆ. ಸ್ಥಳೀಯರು ತಿಮಿಂಗಿಲದ ಕಳೇಬರವನ್ನು ಕಡಲಿಗೆ ದೂಡಿರುವುದಾಗಿ ತಿಳಿದು ಬಂದಿದೆ. ಆದರೆ, ಇದು ಹೆಚ್ಚು ಕೊಳೆತಿರಲಿಲ್ಲ. ಸಾಮಾನ್ಯವಾಗಿ ತಿಮಿಂಗಿಲಗಳು ದೊಡ್ಡ ಗಾತ್ರದ್ದಾಗಿದ್ದು, ಅದು ಸತ್ತು ಆಳ ಸಮುದ್ರದಿಂದ ದಡಕ್ಕೆ ಬರುವಾಗ ಹಲವು ದಿನಗಳಾಗುತ್ತವೆ.

ಹೀಗಾಗಿ ಕಳೇಬರ ಸಂಪೂರ್ಣ ಕೊಳೆತು ವಾಸನೆ ಬರುತ್ತದೆ. ಇದೇ ಜಾತಿಯ ತಿಮಿಂಗಿಲಗಳು ಕಳೆದ ವರ್ಷ ಆಸ್ಟ್ರೇಲಿಯಾ, ಆಫ್ರಿಕಾದ ಕೆಲವು ಭಾಗಗಳಲ್ಲಿ ರಾಶಿ ರಾಶಿಯಾಗಿ ಸತ್ತು ಬಿದ್ದಿದ್ದು ಸುದ್ದಿಯಾಗಿತ್ತು.

Edited By : Nirmala Aralikatti
Kshetra Samachara

Kshetra Samachara

04/02/2021 05:47 pm

Cinque Terre

6.68 K

Cinque Terre

0

ಸಂಬಂಧಿತ ಸುದ್ದಿ