ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೆರೆಕಾಡು ತ್ಯಾಜ್ಯ ಘಟಕದ ರಾಶಿಗೆ ಆಕಸ್ಮಿಕ ಬೆಂಕಿ

ಮುಲ್ಕಿ: ಸಮೀಪನ ಕೆರೆಕಾಡು ತ್ಯಾಜ್ಯ ಘಟಕದ ರಾಶಿಗೆ ಆಕಸ್ಮಿಕ ಬೆಂಕಿ ತಗಲಿ ದ ಘಟನೆ ಬುಧವಾರ ತಡರಾತ್ರಿ ನಡೆದಿದ್ದು ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಪಡುಪಣಂಬೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೆಳ್ಳಾಯರು ಕೆರೆಕಾಡಿನ ಹಿಂದೂ ರುದ್ರಭೂಮಿಯ ಸಮೀಪದಲ್ಲಿ ಪಂಚಾಯತ್‌ನ ತ್ಯಾಜ್ಯ ಸಂಗ್ರಹದ ಕೇಂದ್ರವಿದ್ದು ಯಾರೋ ದುಷ್ಕರ್ಮಿಗಳು ತ್ಯಾಜ್ಯ ರಾಶಿಗೆ ಬೆಂಕಿ ಕೊಟ್ಟಿರಬಹುದು ಎಂದು ಶಂಕಿಸಲಾಗಿದೆ. ಹಲವು ಸಮಯಗಳಿಂದ ಇಲ್ಲಿ ರಸ್ತೆ ಪಕ್ಕದಲ್ಲಿಯೇ ಇರುವ ಈ ತ್ಯಾಜ್ಯ ರಾಶಿಯ ಸಂಗ್ರಹ ಕೇಂದ್ರವನ್ನು ತೆರವುಗೊಳಿಸಲು ಸ್ಥಳೀಯರು ಆಗ್ರಹಿಸಿದ್ದರು. ಬೆಂಕಿಯು ಧಗಧಗನೆ ಉರಿಯಲಾರಂಭಿಸಿದ್ದು ಸ್ಥಳೀಯರಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರು ಧಾವಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

14/01/2021 07:39 am

Cinque Terre

8.71 K

Cinque Terre

0

ಸಂಬಂಧಿತ ಸುದ್ದಿ