ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಣಾಜೆ: ಜಿಲ್ಲೆಗೆ ಹಕ್ಕಿ ಜ್ವರ ಎಂಟ್ರಿ- ಕಾಗೆಗಳ ಸಾಮೂಹಿಕ ಸಾವು..!

ಮಂಗಳೂರು: ಕೊರೊನಾ ಭೀತಿ ಮತ್ತಷ್ಟು ಹೆಚ್ಚುತ್ತಿರುವಾಗ ನೆರೆ ರಾಜ್ಯ ಕೇರಳದಲ್ಲಿ ಮಾರಕ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಆದರೆ ಇದು ಕರಾವಳಿ ನಗರಿ ಮಂಗಳೂರಿಗೂ ಹಕ್ಕಿ ಜ್ವರ ಭೀತಿ ಎದುರಾಗಿದೆ.

ಮಂಗಳೂರು ಹೊರ ವಲಯದ ಕೊಣಾಜೆ ವ್ಯಾಪ್ತಿಯ ಮಂಜನಾಡಿ ಬಳಿಯ ಆರಂಗಡಿ ಎಂಬಲ್ಲಿ ಕಾಗೆಗಳ ಸಾಮೂಹಿಕ ಸಾವು ಸಂಭವಿಸಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಗುಡ್ಡ ಗಾಡು ಪ್ರದೇಶದಲ್ಲಿ‌ ಹಲವಾರು ಕಾಗೆಗಳು ಸತ್ತು ಬಿದ್ದಿರುವುದಾಗಿ ಪ್ರತ್ಯಕ್ಷದರ್ಶಿಯಾದ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಪ್ರಸಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಭೇಟಿ‌ ನೀಡಿ‌ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ಮಾಹಿತಿ‌ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

06/01/2021 02:29 pm

Cinque Terre

18.13 K

Cinque Terre

0

ಸಂಬಂಧಿತ ಸುದ್ದಿ