ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಮುಂದುವರಿದ ಬಿರುಮಳೆಗೆ 14 ಮನೆಗಳಿಗೆ ಹಾನಿ

ಬಂಟ್ವಾಳ: ತಾಲೂಕಿನಲ್ಲಿ ಸೋಮವಾರವೂ ಮಳೆ ಮುಂದುವರಿದಿದ್ದು, 14 ಮನೆಗಳಿಗೆ ಹಾನಿಯುಂಟಾಗಿದೆ. ಇವುಗಳ ಪೈಕಿ 2 ಮನೆಗಳು ಸಂಪೂರ್ಣ ಹಾನಿಗೊಂಡರೆ, 2 ಮನೆಗಳಿಗೆ ತೀವ್ರ ಸ್ವರೂಪದ ಹಾನಿಯಾಗಿವೆ. 9 ಮನೆಗಳು ಭಾಗಶಃ ಹಾನಿಗೊಳಗಾದರೆ, 1 ದನದ ಕೊಟ್ಟಿಗೆಗೂ ಹಾನಿಯಾಗಿದೆ.

ಬಾಳ್ತಿಲ ಗ್ರಾಮದ ದೇಜು ಎಂಬವರ ಕಚ್ಚಾ ಮನೆ, ಮೇರಮಜಲು ಗ್ರಾಮದ ಶಾರದಾ ಅವರ ಮನೆ, ಕೆದಿಲ ಗ್ರಾಮದ ಗಿರಿಯಪ್ಪ ಗೌಡರ ದನದ ಕೊಟ್ಟಿಗೆ, ದೇವಸ್ಯಪಡೂರು ಗ್ರಾಮದ ತಾರಾನಾಥ ಅವರ ಮನೆ, ಕಾವಳಪಡೂರು ಗ್ರಾಮದ ಗಿರಿಜಾ ಅವರ ಮನೆ, ಕೊಳ್ನಾಡು ಗ್ರಾಮದ ಆದಂ ಕುಂಞ ಅವರ ಮನೆ, ಸಾಲೆತ್ತೂರು ಗ್ರಾಮದ ರಾಮಣ್ಣ ಶೆಟ್ಟಿ ಅವರ ಮನೆ, ಕಳ್ಳಿಗೆ ಗ್ರಾಮದ ಸುನಂದಾ ಅವರ ಮನೆ, ಕಳ್ಳಿಗೆ ಗ್ರಾಮದ ಮನೋಹರ ಅವರ ಮನೆ, ಬಿ.ಮೂಡಗ್ರಾಮದ ಶೇಖರ ಅವರ ಮನೆ, ಸಜೀಪಮುನ್ನೂರು ಗ್ರಾಮದ ಅಮೀನಾ ಅವರ ಮನೆ, ವಿಟ್ಲಪಡ್ನೂರು ಗ್ರಾಮದ ಅಬ್ದುಲ್ ರಜಾಕ್ ಅವರ ಮನೆಗೆ ಹಾನಿಯಾಗಿದೆ.

ಇಡ್ಕಿದು ಗ್ರಾಮದ ಚೆನ್ನು ವಾಸದ ಕಚ್ಚಾ ಮನೆ ಭಾರಿ ಗಾಳಿ ಮಳೆಯಿಂದಾಗಿ ಭಾಗಶಃ ಹಾನಿಯಾಗಿದೆ. ಕರೋಪಾಡಿ ಗ್ರಾಮದ ಪದ್ಯಾಣ ಎಂಬಲ್ಲಿ ಪಿ.ಜಿ. ಕೇಶವ ಭಟ್ ಎಂಬವರ ವಾಸ್ತವ್ಯದ ಪಕ್ಕಾ ಮನೆ ಹಾಗೂ ಹಟ್ಟಿಗೆ ಬೃಹತ್ ಮರ ಬಿದ್ದು, ಹಟ್ಟಿ ಸಂಪೂರ್ಣ ಹಾನಿಯಾಗಿದೆ. ಮನೆಗೆ ಭಾಗಶಃ ಹಾನಿಯಾಗಿದ್ದು, ಜಾನುವಾರು ಗಾಯಗೊಂಡಿದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.

Edited By : Vijay Kumar
Kshetra Samachara

Kshetra Samachara

21/09/2020 08:10 pm

Cinque Terre

6.16 K

Cinque Terre

0

ಸಂಬಂಧಿತ ಸುದ್ದಿ