ಬಂಟ್ವಾಳ: ಬಂಟ್ವಾಳ ಸಹಿತ ಹಲವೆಡೆ ಧಾರಾಕಾರ ಮಳೆ ಬುಧವಾರ ಬೆಳಗ್ಗಿನಿಂದಲೇ ಸುರಿಯುತ್ತಿದೆ.
ವಾಯುಭಾರ ಕುಸಿತದಿಂದ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಈ ನಡುವೆ ಘಟ್ಟ ಪ್ರದೇಶದಲ್ಲಿ ಮಳೆಯಾದ ಕಾರಣ, ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಏರಿಕೆಯಾಗಿದ್ದು, 6.2 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಈ ಸಂದರ್ಭ ಮಳೆ ಸುರಿಯುವುದರಿಂದ ಭತ್ತದ ಕೃಷಿಕರಿಗೆ ತೊಂದರೆ ನಿಶ್ಚಿತವಾಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.
Kshetra Samachara
14/10/2020 10:38 am