ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಾರ್ನಾಡ್ ಜಂಕ್ಷನ್ ಬಳಿ ಅಪಾಯಕಾರಿ ಹೊಂಡ ದುರಸ್ತಿ; ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ

ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕಾರ್ನಾಡು ಜಂಕ್ಷನ್ ಬಳಿ ಅಂಗಡಿಯ ಎದುರು ಅಪಾಯಕಾರಿ ಹೊಂಡ ಉಂಟಾಗಿದ್ದು ರಸ್ತೆಯಲ್ಲಿ ನಡೆದಾಡಲು ಅಪಾಯಕಾರಿಯಾಗಿ ಪರಿಣಮಿಸಿದೆ.

ಯಾವಾಗಲೂ ಬ್ಯೂಸಿ ವಾತಾವರಣವಿರುವ ಕಾರ್ನಾಡ್ ಜಂಕ್ಷನ್ ಬಳಿಯ ತೆರೆದ ಅಪಾಯಕಾರಿ ಹೊಂಡವನ್ನು ಕೂಡಲೇ ಮುಚ್ಚುವಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದು ಪಬ್ಲಿಕ್ ನೆಕ್ಸ್ಟ್ ನಲ್ಲಿ ವರದಿ ಕೂಡ ಪ್ರಕಟವಾಗಿತ್ತು. ವರದಿಯ ಬಳಿಕ ಎಚ್ಚೆತ್ತ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಪೂಜಾರಿ ಸೂಚನೆ ಮೇರೆಗೆ ನ.ಪಂ. ಸಿಬ್ಬಂದಿ ಸುಂದರ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ತೆರೆದ ಅಪಾಯಕಾರಿ ಹೊಂಡದಲ್ಲಿದ್ದ ಕಸಕಡ್ಡಿಗಳನ್ನು ತೆರವುಗೊಳಿಸಿ ಹಾಸು ಕಲ್ಲನ್ನು ಹಾಕಿ ಸರಿಪಡಿಸಿದ್ದಾರೆ. ಮುಖ್ಯಾಧಿಕಾರಿ ಚಂದ್ರಪೂಜಾರಿ ಯವರ ತುರ್ತು ಸ್ಪಂದನೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

Edited By : PublicNext Desk
Kshetra Samachara

Kshetra Samachara

27/09/2021 10:01 pm

Cinque Terre

4.11 K

Cinque Terre

0

ಸಂಬಂಧಿತ ಸುದ್ದಿ