ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಜಿರೆ: "ಅದೆಷ್ಟೋ ಜನರಿಗೆ ಶುದ್ಧ ಕುಡಿಯುವ ನೀರು ಈಗಲೂ ಅಲಭ್ಯ!"

ಉಜಿರೆ: ಸರಕಾರಗಳು ಅನೇಕ ವರ್ಷಗಳಿಂದಲೂ ಕುಡಿಯುವ ನೀರಿನ ಪೂರೈಕೆಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡು ಬರುತ್ತಿದೆ. ಆದರೆ, ಈಗಲೂ ಎಷ್ಟೋ ಜನರಿಗೆ ಶುದ್ಧ ಕುಡಿಯುವ ನೀರು ಲಭಿಸುತ್ತಿಲ್ಲ. ಆದ್ದರಿಂದ ಪ್ರತಿ ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಒದಗಿಸಲು ಜಲಜೀವನ್ ಮಿಷನ್ ಯೋಜನೆ ಜಾರಿಗೆ ತರಲಾಗಿದೆ ಎಂದು ಉಜಿರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ನೂಚ್ಚ ಹೇಳಿದರು.

ಅವರು ಇಂದು ದ.ಕ. ಜಿಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು,ತಾಪಂ ಬೆಳ್ತಂಗಡಿ ಮತ್ತು ಜೆಜೆಎಂ ಅನುಷ್ಠಾನ ಬೆಂಬಲ ಸಂಸ್ಥೆಯಾದ ಸಮುದಾಯದ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಪಂಗಳ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ಉಜಿರೆ ಗ್ರಾಪಂ ಸಭಾಂಗಣದಲ್ಲಿ ನಡೆದ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು‌. ವಿವಿಧ ಪ್ರದೇಶಗಳಿಗೆ ಹೋಲಿಸಿದಲ್ಲಿ ಕರಾವಳಿ ಭಾಗದ ನಾವು ಜಲಸಂಪನ್ಮೂಲ ಹೆಚ್ಚಾಗಿ ಹೊಂದಿದ್ದೇವೆ. ಮುಂದಿನ ತಲೆಮಾರಿಗೂ ಅಂತರ್ಜಲ ಉಳಿಸುವ ಕಾರ್ಯ ನಮ್ಮಿಂದ ಆಗಬೇಕಿದೆ. ಯಾರೂ ಕೂಡ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಬಾರದು ಎಂಬುದು ಜಲಜೀವನ್ ಮಿಷನ್ನಿನ ಮುಖ್ಯ ಧ್ಯೋಯೋದ್ದೇಶ. ಈ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ಕ್ಷೇತ್ರ ಮಟ್ಟದ ಕಾರ್ಯಕರ್ತರ ಪಾತ್ರ ಬಹುಮುಖ್ಯ ಎಂದರು.

ನೀರು ಪರೀಕ್ಷಾ ವಿಧಾನದ ಕುರಿತು ಆದಿತ್ಯ ಮಾಹಿತಿ ನೀಡಿದರು. ಬಳಿಕ ಜೆಜೆಎಂ ಜಿಲ್ಲಾ ಐಇಸಿ/ಹೆಚ್ಆರ್‌ಡಿ ಮುಖ್ಯಸ್ಥ ಶಿವರಾಮ್ ಪಿ.ಬಿ. ಜಲಜೀವನ್ ಮಿಷನ್ ನ ಉದ್ದೇಶ ಮತ್ತು ಅಗತ್ಯದ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಜೆಜೆಎಂ ಐಇಸಿ ಮಹಾಂತೇಶ್ ಹಿರೇಮಠ್ ಮತ್ತು ಹೆಚ್ಆರ್ ಡಿ ಫಲಾಹರೇಶ್ ಮಣ್ಣೂರಮಠ ತಮ್ಮ ತಮ್ಮ ಚಟುವಟಿಕೆ ಹಂಚಿಕೊಂಡರು. ಸಮುದಾಯ ಸಂಸ್ಥೆಯ ಇಂಜಿನಿಯರ್ ಅಶ್ವಿನ್ ಗ್ರಾಮ ಕ್ರಿಯಾ ಯೋಜನೆ ಬಗ್ಗೆ ಪಂಚಾಯಿತಿಗಳು ಒದಗಿಸಬೇಕಾದ ವಿವರಗಳ ಬಗ್ಗೆ ತಿಳಿಸಿದರು. ಸಹಾಯಕ ಇಂಜಿನಿಯರ್ ಹರ್ಷಿತ್ ತಮ್ಮ ಕಾರ್ಯ ವ್ಯಾಪ್ತಿ ಕುರಿತು ತಿಳಿಸಿದರು. ಸುತ್ತಲಿನ 12 ಗ್ರಾಪಂ ವ್ಯಾಪ್ತಿಯ ಒಟ್ಟು 60 ಜನರು ಮತ್ತು ಕೆಲವು ಪಿಡಿಒ ಗಳು,ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ ಆಯೋಜನೆಯ ಸಹಾಯಕ ರಘುಚಂದ್ರ ಮತ್ತಿತರರು ಭಾಗವಹಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

19/01/2021 07:09 pm

Cinque Terre

3.71 K

Cinque Terre

0

ಸಂಬಂಧಿತ ಸುದ್ದಿ