ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಸಾಂತಾವರದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ, ಅಧ್ಯಯನ

ಕುಂದಾಪುರ : ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ಸಾಂತಾವರ ಶ್ರೀ ವೀರಾಂಜನೇಯ ದೇವಾಲಯದ ಆಣತಿ ದೂರದ ಜನಾರ್ದನ ಸೇರೆಗಾರ್ ಅವರ ಆರವತ್ತು ಆನೆ ಗದ್ದೆಯಲ್ಲಿ ಕ್ರಿ.ಶ 15-16 ನೇ ಶತಮಾನದ ವಿಜಯನಗರ ಕಾಲದ ಶಾಸನ ಕಲ್ಲು ಪತ್ತೆಯಾಗಿದೆ.

ಶಾಸನದಲ್ಲಿ ಸೂರ್ಯ, ಚಂದ್ರ ಇರುವುದರೋಂದಿಗೆ ಸೂರ್ಯ-ಚಂದ್ರ ಇರುವ ತನಕ ಅಜರಾಮರವಾಗಿರಲಿ ಎನ್ನುವ ಸಂದೇಶ ದೊಂದಿಗೆ ಎಡ ಭಾಗದಲ್ಲಿ ನಂದಿ ವಿಗ್ರಹದ ಜೊತೆಗೆ ಶಿವಲಿಂಗವೂ ಇದೆ.

ಶಿವಲಿಂಗದ ಬಲ ಭಾಗದಲ್ಲಿ ದೀಪಸ್ತಂಭವಿದೆ. ಇದರೊಂದಿಗೆ ರಾಜ ಶಾಸನವೆಂದೂ ತಿಳಿಸಲು ಖಡ್ಗವಿರುವುದು ಕಂಡು ಬಂದಿದೆ. ಶಾಸನದ ಪಠ್ಯ ಅಸ್ಪಷ್ಟವಾಗಿ ಕಾಣುತ್ತಿದೆ.

ಈ ಶಾಸನ ಕ್ರಿ.ಶ 15-16 ನೇ ಶತಮಾನದ ವಿಜಯನಗರ ಕಾಲದ (ಸುಮಾರು 400-500 ವರ್ಷದ ಶಾಸನ) ಶಾಸನವೆಂದು ತಿಳಿದು ಬಂದಿದೆ.

ಈ ಶಾಸನವನ್ನು ಪ್ರದೀಪ್ ಕುಮಾರ್ ಬಸ್ರೂರು ಅವರು ಇತಿಹಾಸ ಸಂಶೋಧಕ ಡಾ.ಕಿಶೋರ್ ಕುಮಾರ್ ಶೆಟ್ಟಿ ಮಾರ್ಗದರ್ಶನದಲ್ಲಿ ಪತ್ತೆ ಹಚ್ಚಲಾಗಿದೆ.

ಇವರಿಗೆ ಭರತ್ ಗುಡಿಗಾರ, ಜನಾರ್ದನ್ ಸೇರೆಗಾರ್ ಸಹಕಾರ ನೀಡಿದರು. ಶಾಸನದ ಅಧ್ಯಯನವಾಗುತ್ತಿದ್ದು, ಬಳಿಕವಷ್ಟೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು.

ಕಂದಾವರ ಪರಿಸರದಲ್ಲಿ ವಿಜಯನಗರ ಕಾಲದ ಅಧಿಕ ಶಾಸನಗಳಿದ್ದು, ಸಂರಕ್ಷಿಸಬೇಕಾದ ಅಗತ್ಯ ಇದೆ. ಈ ಹಿಂದೆ ಸ್ವಲ್ಪ ದೂರದಲ್ಲಿ ವಾಮನ ಮುದ್ರಿಕೆ ಕಲ್ಲು ಹಾಗೂ ವಿಜಯನಗರ ಕಾಲದ ಶಾಸನ ಕಲ್ಲುಗಳನ್ನು ಪ್ರದೀಪ್ ಕುಮಾರ್ ಬಸ್ರೂರು ಪತ್ತೆ ಹಚ್ಚಿದ್ದರು.

Edited By : Nirmala Aralikatti
Kshetra Samachara

Kshetra Samachara

03/12/2020 01:55 pm

Cinque Terre

5.54 K

Cinque Terre

0

ಸಂಬಂಧಿತ ಸುದ್ದಿ