ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೆರ್ಮುದೆ: "ಎಲ್ಲರಿಗೂ ಮೂಲ ಸೌಕರ್ಯ ಕಲ್ಪಿಸುವುದು ಜನಪ್ರತಿನಿಧಿಗಳ ಕರ್ತವ್ಯ"

ಮುಲ್ಕಿ: ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡದೇ ಯಾವುದೇ ಜಾತಿ- ಧರ್ಮ, ಪಕ್ಷದ ಮತದಾರ ಅದರೂ ಎಲ್ಲರಿಗೂ ಮೂಲಭೂತ ಸೌಕರ್ಯ ತಲುಪಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ ಎಂದು ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಪೆರ್ಮುದೆ ಕುತ್ತೆತ್ತೂರು ಗ್ರಾಪಂ ವ್ಯಾಪ್ತಿಯ 12 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು. ದ.ಕ. ಜಿಲ್ಲೆಯಲ್ಲಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯದಿಕ ಅಂದರೆ ಸುಮಾರು 8350 ಹಕ್ಕು ಪತ್ರ ಅಧಿಕಾರಿಗಳ ಸಹಕಾರದಿಂದ ವಿತರಿಸಲಾಗಿದೆ ಎಂದರು.

ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಪಂ ಸದಸ್ಯೆ ಶಶಿಕಲಾ ಶೆಟ್ಟಿ, ಉಪತಹಶೀಲ್ದಾರ್ ನವೀನ್, ಪೆರ್ಮುದೆ ಗ್ರಾಪಂ ಪಿಡಿಒ ಶೈಲಜಾ, ಕಾರ್ಯದರ್ಶಿ ನಾಗೇಶ್, ಗ್ರಾಮಕರಣಿಕ ಉಮೇಶ್, ಪೆರ್ಮುದೆ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಧರ ಕಣಿ, ಮಾಜಿ ಉಪಾಧ್ಯಕ್ಷ ಕಿಶೋರ್ ಕೋಟ್ಯಾನ್,ಮಾಜಿ ಸದಸ್ಯರಾದ ರಾಮಪ್ರಸಾದ್ ಪಂಡಿತ್,ಜಗನ್ನಾಥ ಶೆಟ್ಟಿ, ಚೇಳಾಯರು ಗ್ರಾಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

02/11/2020 07:16 pm

Cinque Terre

2.84 K

Cinque Terre

0

ಸಂಬಂಧಿತ ಸುದ್ದಿ