ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರಿನ ಪ್ರತಿ ಹಳ್ಳಿಗೂ ಬರುತ್ತೆ ಬಸ್

ಪುತ್ತೂರು- ತಾಲೂಕಿನಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಇನ್ನು ಇಲ್ಲಿನ ಪ್ರತಿ ಹಳ್ಳಿ-ಹಳ್ಳಿಗೂ ಬಸ್ ಬರಲಿದೆ. ಇದರ ಸಾಕಾರಕ್ಕಾಗಿ ಪುತ್ತೂರು ಪಟ್ಟಣದಲ್ಲಿ ಕೆ ಎಸ್ ಆರ್ ಟಿ ಸಿ ತನ್ನ ಎರಡನೇ ಘಟಕ ಆರಂಭಿಸಲು ಎಲ್ಲ ರೀತಿಯ ಪ್ಲ್ಯಾನ್ ಹಾಕಿದೆ.

ಪ್ರತಿ ಗ್ರಾಮಕ್ಕೆ ಬಸ್ ಸಂಪರ್ಕ ಒದಗಿಸುವ ಉದ್ದೇಶದಿಂದ ಈ 2ನೇ ಘಟಕ ತಲೆ ಎತ್ತಲಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಈಗಾಗಲೇ ಇದಕ್ಕಾಗಿ ಯೋಜ‌ನೆ ರೂಪಿಸಿದ್ದು ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ 3 ಕಿಮೀ ವ್ಯಾಪ್ತಿಯೊಳಗೆ 1.5 ಎಕರೆ ನಿವೇಶನ ಮಂಜೂರು ಮಾಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

28/10/2020 01:06 pm

Cinque Terre

6.99 K

Cinque Terre

1

ಸಂಬಂಧಿತ ಸುದ್ದಿ