ಮುಲ್ಕಿ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಗುರುಪುರ ಗ್ರಾಪಂ ವ್ಯಾಪ್ತಿಯಲ್ಲಿ 3 ಕೋಟಿ ರೂ.ಗೂ ಅಧಿಕ ಅನುದಾನದ ಅಡಿಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ವೈ. ಭರತ್ ಶೆಟ್ಟಿ ಶನಿವಾರ ಗುದ್ದಲಿ ಪೂಜೆ ಮತ್ತು ಉದ್ಘಾಟನೆ ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ಪ್ರತಿ ಹಳ್ಳಿಗೂ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹಂತಹಂತವಾಗಿ ಚಾಲನೆ ನೀಡಲಾಗುವುದು ಎಂದರು.
ಕಾಮಗಾರಿಗಳಲ್ಲಿ 20 ಲಕ್ಷ ರೂ. ಅನುದಾನದಲ್ಲಿ ಮೂಳೂರು ಗ್ರಾಮದ ಸದಾಶಿವ ದೇವಸ್ಥಾನ ರಸ್ತೆ ಅಭಿವೃದ್ದಿ ಗುದ್ದಲಿ ಪೂಜೆ, 20 ಲಕ್ಷ ರೂ. ಅನುದಾನದಲ್ಲಿ ಮೂಳೂರು ಗ್ರಾಮದ ಜಂಗಮ ಮಠ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ, 10 ಲಕ್ಷ ರೂ. ಅನುದಾನದಲ್ಲಿ ಮೂಳೂರು ಗ್ರಾಮದ ವನಭೋಜನ ಬರ್ಕೆ ರಸ್ತೆ ಉದ್ಘಾಟನೆ, ಮೂಳೂರು ಗ್ರಾಮದ ಬಂಗ್ಲೆಗುಡ್ಡೆ ಯಲ್ಲಿ 16 ಲಕ್ಷ ಅನುದಾನದಲ್ಲಿ ಹೊಸ ಅಂಗನವಾಡಿ ರಚನೆಗೆ ಶಿಲಾನ್ಯಾಸ, 5 ಲಕ್ಷ ರೂ. ಅನುದಾನದಲ್ಲಿ ಅಡ್ಡೂರ್ ಗ್ರಾಮದ ನಂದ್ಯಾ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಶಾಸಕ ಡಾ. ಭರತ್ ಶೆಟ್ಟಿ ನೆರವೇರಿಸಿದರು.
ಶಾಸಕರೊಂದಿಗೆ ಗುರುಪುರ ಮಹಾ ಶಕ್ತಿಕೇಂದ್ರ ಅಧ್ಯಕ್ಷ ಸೋಹನ್ ಅತಿಕಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಉತ್ತರ ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಜಿ.ಕೆ. ಮಂಡಲ ಎಸ್ ಟಿ ಮೋರ್ಚಾ ಉಪಾಧ್ಯಕ್ಷ ರಾಜೇಂದ್ರ ನಾಯ್ಕ್, ಮಂಡಲ ಸದಸ್ಯರಾದ ಜಲಜ ಕೆ,. ಶೋಭಾ ದಾಮೋದರ್, ಶೈಲಜಾ, ಗುರುಪುರ ಶಕ್ತಿಕೇಂದ್ರ ಪ್ರಮುಖ್ ಶ್ರೀಕರ ವಿ.ಶೆಟ್ಟಿ ಸಹ ಪ್ರಮುಖ್ ವಿನೋದ್ ಬರ್ಕೆ ಬೂತ್ ಅಧ್ಯಕ್ಷ ಹೇಮಚಂದ್ರ , ರಾಜೇಶ್ ಶೆಟ್ಟಿ,ವಿನಯ್ ಸುವರ್ಣ,ಮೊಹಮ್ಮದ್ ಸಾದಿಕ್ ಕಾರ್ಯದರ್ಶಿಗಳಾದ ಓಂಕಾರ್, ಚರಣ್, ಹಿರಿಯರಾದ ಪುರಂದರ ಮಲ್ಲಿ, ಸತೀಶ್ ಕಾವ,ರಮಾನಂದ ಶೆಟ್ಟಿ ಪಕ್ಷದ ಪ್ರಮುಖರಾದ ಸಚಿನ್ ಶೆಟ್ಟಿ, ಸೇಸಮ್ಮ, ಶ್ಯಾಮ್ ಆಚಾರ್ಯ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
24/10/2020 04:57 pm