ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅಣೆಕಟ್ಟೆಗೆ ಹಲಗೆ ಹಾಕಿ ಶ್ರಮದಾನ; ಶಿಮಂತೂರು ಯುವಕರ ಮಾದರಿ ಸೇವೆ

ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಯುವಕ ಮಂಡಲ ವತಿಯಿಂದ ಅತಿಕಾರಿಬೆಟ್ಟು ಗ್ರಾಪಂ ಸಹಕಾರದೊಂದಿಗೆ ಭಾನುವಾರ ಶ್ರಮದಾನದ ಮೂಲಕ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನ ಬಳಿಯ ಕುಲಂದಕಟ್ಟ ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕಿ ನೀರು ತಡೆ ನಿರ್ಮಿಸಿದ್ದಾರೆ.

ಅಣೆಕಟ್ಟೆಗೆ ಹಲಗೆ ಹಾಕಿದ್ದರಿಂದ ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಕೃಷಿ ಪ್ರಧಾನ ಪ್ರದೇಶ ಶಿಮಂತೂರು, ಪರಂಕಿಲ ಆಸುಪಾಸು ಕೃಷಿ ಕಾರ್ಯಕ್ಕೆ ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗಿದೆ.

ಹಲವು ವರ್ಷಗಳಿಂದ ಶಿಮಂತೂರಿನ ಯುವಕ ಮಂಡಲ ಶಿಮಂತೂರು ಪರಿಸರದಲ್ಲಿ ಅನೇಕ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದೆ.

ಕೆಲ ದಿನಗಳ ಹಿಂದೆ ಶಿಮಂತೂರು ಪರಿಸರದ ರಸ್ತೆ ದುರಸ್ತಿಯಲ್ಲಿಯೂ ಅತಿಕಾರಿಬೆಟ್ಟು ಪಿಡಿಒ ರವಿ ಸಹಕಾರದೊಂದಿಗೆ ಯುವಕ ಮಂಡಲದ ಸದಸ್ಯರು ಶ್ರಮದಾನ ನಡೆಸಿದ್ದರು.

ಶಿಮಂತೂರು ಯುವಕ ಮಂಡಲ ಸದಸ್ಯರ ಸಮಾಜಮುಖಿ ಕಾರ್ಯವೈಖರಿ ವೈರಲ್ ಆಗಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Edited By : Nirmala Aralikatti
Kshetra Samachara

Kshetra Samachara

30/11/2020 02:53 pm

Cinque Terre

5.73 K

Cinque Terre

0

ಸಂಬಂಧಿತ ಸುದ್ದಿ