ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಸರಗೋಡು: ಬಂದ್ಯೋಡು ಹೆದ್ದಾರಿ ಅಪಘಾತಕ್ಕೆ ಬಿಜೆಪಿಯ ಕುಂಬಳೆ ಮಂಡಲ ಕಾರ್ಯದರ್ಶಿ ಮೃತ್ಯು

ಕಾಸರಗೋಡು: ಬಿಜೆಪಿಯ ಕುಂಬಳೆ ಮಂಡಲ ಕಾರ್ಯದರ್ಶಿ, ಉಪ್ಪಳ ಪ್ರತಾಪನಗರ ನಿವಾಸಿ ಧನರಾಜ್ (44) ರಸ್ತೆ ಅಪಘಾತದಲ್ಲಿ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಬಂದ್ಯೋಡಿನಲ್ಲಿ ಬಿಜೆಪಿ ಮೀಟಿಂಗ್ ಮುಗಿಸಿ ಮನೆ ಕಡೆಗೆ ಹಿಂತಿರುಗುತ್ತಿದ್ದರು‌. ಈ ವೇಳೆ ಇವರ ಬೈಕಿಗೆ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.

ಬಂದ್ಯೋಡು ಶಿರಿಯಾದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿತ್ತು. ಆದ್ದರಿಂದ ಏಕಮುಖದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಲಾಗಿತ್ತು. ಇದರಿಂದ ರಸ್ತೆಯಲ್ಲಿ ಅವರು ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದಾಗ ಮುಂಭಾಗ ವೇಗವಾಗಿ ಬಂದ ಕಾರೊಂದು ಬೈಕಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಧನರಾಜ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಹಿಂದೆ ಮಂಗಳೂರು- ಕಾಸರಗೋಡು ಮಧ್ಯೆ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ತಾತ್ಕಾಲಿಕ ನೆಲೆಯಲ್ಲಿ ನಿರ್ವಾಹಕರಾಗಿದ್ದ ಧನರಾಜ್ 2-3 ವರ್ಷಗಳಿಂದ ಕೆಲಸ ಬಿಟ್ಟು ಊರಲ್ಲಿನಲ್ಲೇ ಇದ್ದರು. ಬಿಜೆಪಿ ಮತ್ತು ಹಿಂದೂ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದ ಇವದು ಕುಂಬಳೆ ಮಂಡಲ ಕಾರ್ಯದರ್ಶಿ, ಪ್ರತಾಪನಗರ ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ಸ್ಥಾಪಕ ಸದಸ್ಯರಾಗಿದ್ದರು. ಧನ್‌ರಾಜ್ ಅವಿವಾಹಿತರಾಗಿದ್ದು, ಸಂಘಟನೆಗಾಗಿಯೇ ತನ್ನ ಜೀವನ ಮುಡಿಪಾಗಿಟ್ಟಿದ್ದರು.

Edited By : Abhishek Kamoji
PublicNext

PublicNext

14/12/2024 10:05 pm

Cinque Terre

6.81 K

Cinque Terre

4

ಸಂಬಂಧಿತ ಸುದ್ದಿ