ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66 ಹಳೆಯಂಗಡಿ ಸಮೀಪದ ಪಾವಂಜೆ ಸೇತುವೆ ಬಳಿ ನದಿಗೆ ಹಾರಲು ಯತ್ನಿಸಿದ ಮಹಿಳೆಯೊಬ್ಬರನ್ನು ಬುದ್ಧಿ ಮಾತು ಹೇಳಿ ಯುವಕನೊಬ್ಬ ರಕ್ಷಿಸಿದ್ದಾನೆ.
ಸುರತ್ಕಲ್ ಸಮೀಪದ ಕೃಷ್ಣಾಪುರ ಮೂಲದ ಮುಸ್ಲಿಂ ಮಹಿಳೆಯೊಬ್ಬರು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಪಾವಂಜೆ ಸೇತುವೆ ಬಳಿ ನದಿಗೆ ಹಾರಲು ಯತ್ನಿಸಿದ್ದಾರೆ. ಈ ಸಂದರ್ಭ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸ್ಥಳೀಯ ಯುವಕ ಪ್ರವೀಣ್ ಎಂಬಾತ ಗಮನಿಸಿದ್ದು ಕೂಡಲೇ ತಮ್ಮ ಮಿತ್ರರಿಗೆ ತಿಳಿಸಿ ಸ್ಥಳಕ್ಕೆ ಧಾವಿಸಿ ಮಹಿಳೆಗೆ ಬುದ್ಧಿ ಮಾತು ಹೇಳಿ ರಕ್ಷಿಸಿ ವಾಪಸ್ ಮನೆಗೆ ಕಳಿಸಿದ್ದಾರೆ. ಯುವಕನ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
PublicNext
13/12/2024 11:42 am