ಮುಲ್ಕಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಯೋಗದೊಂದಿಗೆ, ತಾಲೂಕು ಪಂಚಾಯತ್ ಹಾಗೂ ಕಿಲ್ಪಾಡಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಪೋಷಣ ಅಭಿಯಾನ ಯೋಜನೆಯಡಿಯಲ್ಲಿ "ಆರೋಗ್ಯ ಅಮೃತ ಅಭಿಯಾನ" ಕಾರ್ಯಕ್ರಮ ಕಿಲ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಿಲ್ಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿ ಎಳವೆಯಲ್ಲಿ ಮಕ್ಕಳಿಗೆ ಉತ್ತಮ ಶಿಸ್ತನ್ನು ಕಲಿಸುವ ಮುಖಾಂತರ ಮಕ್ಕಳು ದುಷ್ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ವಹಿಸಬೇಕು. ಸಮತೂಕದ ಆಹಾರದಿಂದ ಮಕ್ಕಳ ಬೆಳವಣಿಗೆ ಸಾಧ್ಯ ಎಂದರು.
ಆರೋಗ್ಯ ಸುರಕ್ಷಣಾಧಿಕಾರಿ ಸುಮಲತಾ, ಆಯುಷ್ ಇಲಾಖೆಯ ಸುಜಾತ ಶೆಟ್ಟಿ ಯೋಗದ ಬಗ್ಗೆ, ಯುನಾನಿ ಆಸ್ಪತ್ರೆಯ ಡಾ. ಮಹಮ್ಮದ್ ಅಶ್ಫಕ್ ಪೌಷ್ಟಿಕಾಂಶ ದ ಬಗ್ಗೆ, ಸಮಾಜ ಸೇವಕಿ ಲಲಿತಾ ಭಾಸ್ಕರ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವೇದಿಕೆಯಲ್ಲಿ ಬಾಲವಿಕಾಸ ಕಮಿಟಿ ಅಧ್ಯಕ್ಷೆ ಪ್ರಿಯಾ ರಾಜಕುಮಾರ, ಶಾಲಾ ಮುಖ್ಯ ಶಿಕ್ಷಕಿ ಪ್ರಫುಲ್ಲ, ತಾಲೂಕು ಸಂಯೋಜಕಿ ಅನ್ವಿತಾ, ಶರ್ಲಿನ್, ನಾಗಿಣಿ, ಆಶಾ ಕಾರ್ಯಕರ್ತೆಯರಾದ ಮಂಜುಳಾ ಸುಪ್ರಭಾ ಶಶಿಕಲಾ, ಅಂಗನವಾಡಿ ಕಾರ್ಯಕರ್ತೆ ಜಲಜ, ಸಹಾಯಕಿ ವಸಂತಿ ಉಪಸ್ಥಿತರಿದ್ದರು.
Kshetra Samachara
21/09/2022 12:54 pm