ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಉಚಿತ ಆರೋಗ್ಯ ತಪಾಸಣಾ ಶಿಬಿರ Don't Release

ಕಟೀಲು:ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಅವಕಾಶವಾಗಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಟೀಲು ದೇಗುಲದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ ಹೇಳಿದರು ಅವರು ಕೆಎಂಸಿ ಮಂಗಳೂರಿನ ಸಮುದಾಯ ಔಷಧ ವಿಭಾಗದ ವಿದ್ಯಾರ್ಥಿಗಳು ಕಟೀಲು ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ಪರಿಸರದ ಕುಟುಂಬ ದತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಮುದಾಯ ಔಷಧ ವಿಭಾಗದ ಮುಖ್ಯಸ್ಥೆ ಡಾ ರೇಖಾ ಟಿ ಮಾತನಾಡಿ ಎಂಬಿಬಿಎಸ್ ಮೊದಲ ವರುಷದ 250 ವಿದ್ಯಾರ್ಥಿಗಳು ಮನೆಮನೆಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಪ್ರತಿ ವಿದ್ಯಾರ್ಥಿಗೆ 2 ಕುಟುಂಬದ ಜವಾಬ್ದಾರಿಯನ್ನು ನೀಡಲಾಗಿದ್ದು ವರುಷಕ್ಕೆ ಎರಡು ಸಲ ನಿರಂತರ 3 ವರುಷ ಅಧ್ಯಯನ ಮಾಡುತ್ತಾರೆ, ಇದು ವೈದ್ಯಕೀಯ ಪದವಿಪೂರ್ವದ ವಿದ್ಯಾರ್ಥಿಗಳಿಗೆ ಅನುಭವದ ಕಲಿಕೆಯ ಅವಕಾಶವಲ್ಲದೆ ಸಮುದಾಯದ ಆರೋಗ್ಯದ ಕಾಳಜಿಯ ಬಗ್ಗೆ ಅರಿವು ಹಾಗೂ ಸಮುದಾಯ ಸಂಪರ್ಕದ ಕೊಂಡಿಯಾಗಿದೆ ಇದು ಆರೋಗ್ಯ ಕಾಳಜಿಯ ನಿರಂತರ ಅಧ್ಯಯನವನ್ನು ಒದಸಲಿದೆ ಎಂದರು

ಡಾ ಅನಿಮೇಶ್ ಜೈನ್ , ಡಾ ನಿತಿನ್ ಗಟ್ಟಿ ಡಾ ನಿತಿನ್ ಜೋಸೆಫ್ , ಡಾ ಪ್ರಚೇತ್ ಡಾ ಮಿಥುನ್ , ತಾರಾನಾಥ ಶೆಟ್ಟಿ ನಿತೇಶ್ ಶೆಟ್ಟಿ ಎಕ್ಕಾರು ಕವಿತ ಶೆಟ್ಟಿ ರಾಹುಲ್, ಹರಿಪ್ರಸಾದ್ ಅಥಿರಾ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

22/07/2022 05:00 pm

Cinque Terre

1.89 K

Cinque Terre

1

ಸಂಬಂಧಿತ ಸುದ್ದಿ