ಕಟೀಲು:ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ಹೃದಯ ರೋಗ ವಿಭಾಗಕ್ಕೆ ರೋಗ ಪತ್ತೆ ಹಚ್ಚುವ ಮತ್ತು ಅತ್ಯಾಧುನಿಕ ಮಟ್ಟದ ಹೃದಯ ರೋಗ ಚಿಕಿತ್ಸೆಗಾಗಿ ನೂತನ TMT(Tread mill ) ಯಂತ್ರವನ್ನು ಉದ್ಘಾಟನೆ ಮಾಡಲಾಯಿತು.
ಶ್ರೀ ದುರ್ಗಾ ಪರಮೇಶ್ವರೀ ದೇವಳ ಕಟೀಲ್ ನ ಅನುವಂಶಿಕ ಪ್ರಧಾನ ಅರ್ಚಕ ವೇದಮೂರ್ತಿ ಹರಿನಾರಾಯಣ ದಾಸ ಆಸ್ರಣ್ಣ ದೀಪ ಪ್ರಜ್ವಲಿಸಿ ಉದ್ಘಾಟನೆಗೊಳಿಸಿದರು ಮತ್ತು ಗ್ರಾಮೀಣ ಭಾಗದ ಜನರಿಗೆ ಉನ್ನತ ಮಟ್ಟದ ವೈದ್ಯಕೀಯ ಸೌಲಭ್ಯನೀಡುವ ಮಣಿಪಾಲ್ ಸಮೂಹ ಸಂಸ್ಥೆಯ ಈ ಯೋಜನೆ ಅಭಿನಂದನಾರ್ಹ. ಹಾಗೆಯೇ ಗ್ರಾಮೀಣ ಭಾಗದಲ್ಲಿ ಇಂತಹ ವೈದ್ಯಕೀಯ ಸೌಲಭ್ಯ ಸಿಗುವುದು ತೀರಾ ವಿರಳ ಹೃದಯ ರೋಗ ಪತ್ತೆಗೆ ಇದು ತುಂಬಾ ಸಹಕಾರಿಯಾಗಲಿದೆ. ಎಲ್ಲರೂ ಹೃದಯ ಸಂಬಂಧಿ ಕಾಯಿಲೆಯಿಂದ ಮುಕ್ತರಾಗಿ ಹೃದಯವಂತರಾಗುವ ಎಂದು ಹಾರೈಸಿದರು.
ಕೆ ಎಮ್ ಸಿ ಆಸ್ಪತ್ರೆ ಅಂಬೇಡ್ಕರ್ ವೃತ್ತದ ವೈದ್ಯಕೀಯ ಅಧೀಕ್ಷಕ ಡಾ ಆನಂದ್ ವೇಣುಗೋಪಾಲ್ ಮಂಗಳೂರು ಕೆಎಂಸಿ ಹೃದಯ ರೋಗ ವಿಭಾಗದ ಮುಖ್ಯಸ್ಥರಾದ ಡಾ.ಪದ್ಮನಾಭ ಕಾಮತ್. ಕೆ ಎಮ್ ಸಿ ಮಂಗಳೂರು ಸಾಮಾನ್ಯ ರೋಗ ವಿಭಾಗದ ಮುಖ್ಯಸ್ಥರಾದ ಡಾ. ಚಕ್ರಪಾಣಿ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಕಟೀಲಿನ ಎಲುಬು ಮತ್ತು ಕೀಲು ರೋಗ ವಿಭಾಗದ ತಜ್ಞರಾದ ಡಾ ಸುಧೀಂದ್ರ ಕಾರ್ನಾಡ್. ನಿತೇಶ್ ಶೆಟ್ಟಿ ಎಕ್ಕಾರು, ರೋಲ್ಫ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
27/05/2022 12:17 pm