ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್‌: ಆರೋಗ್ಯ ಜಾಗೃತಿ ನಿರಂತರವಾಗಿರಲಿ: ಡಾ.ಭರತ್ ಶೆಟ್ಟಿ

ಸುರತ್ಕಲ್: ಜನತೆಗೆ ಆರೋಗ್ಯ ಶಿಬಿರ, ಆರೋಗ್ಯ ಮೇಳವನ್ನು ಆಯೋಜಿಸಿದ ಸಂದರ್ಭ ಮುಂದಿನ ಅವರ ಚಿಕಿತ್ಸೆಗೆ ಬೇಕಾದ ಮಾಹಿತಿ, ಕೌನ್ಸಿಂಗ್ ವ್ಯವಸ್ಥೆ ಸಹಿತ ಎಲ್ಲವೂ ನಿರಂತರವಾಗಿ ಸಿಕ್ಕಾಗ ಇಂತಹ ಆರೋಗ್ಯ ಮೇಳಗಳು ಪ್ರಯೋಜಕಾರಿಯಾಗುತ್ತದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ದ.ಕ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ಮಹಾ ನಗರ ಪಾಲಿಕೆ, ಜಿಲ್ಲಾ ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶ್ರೀನಿವಾಸ್ ವೈದ್ಯಕೀಯ ಕಾಲೇಜು ಮುಕ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುರತ್ಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆಯೋಜಿಸಲಾದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು.

ದ.ಕ ಜಿಲ್ಲೆ ಆರೋಗ್ಯ ಕ್ಷೇತ್ರದಲ್ಲಿ ಮುಂದಿದೆ. ಆದರೆ ಸರಕಾರಿ ಆರೋಗ್ಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಹಾಗೂ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಾ ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳಲು, ಮಾಹಿತಿ ಒದಗಿಸಲು ತಾಲೂಕು ಮಟ್ಟದ ಆರೋಗ್ಯ ಮೇಳ ಸಹಕಾರಿ.ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಹಲವು ಕೇಂದ್ರವನ್ನು ಖಾಸಗೀ ಆಸ್ಪತ್ರೆಗಳ ಜತೆಗೂಡಿ ಮೇಲ್ದರ್ಜೆಗೆ ಏರಿಸುವ ಚಿಂತನೆಯಿದೆ ಎಂದರು.

ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್, ಆರೋಗ್ಯಾಧಿಕಾರಿ ಡಾ.ಕಿಶೋರ್‌ ಕುಮಾರ್‌, ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್‌ ಸುಮಂಗಳರಾವ್, ಮನಪಾ ಸದಸ್ಯೆಯರಾದ ಶ್ವೇತ ಎ ಪೂಜಾರಿ, ಸರಿತ ಶಶಿಧರ್‌, ಶೋಭಾ ರಾಜೇಶ್, ಶಂಶಾದ್ ಬೇಗಮ್, ನಯನ ಆರ್. ಕೋಟ್ಯಾನ್, ಲಕ್ಷ್ಮೀಶೇಖರ್ ದೇವಾಡಿಗ, ಕಾರ್ಪೋರೇಟರ್ ಗಳಾದ ವರುಣ್ ಚೌಟ, ಲೋಕೇಶ್ ಬೊಳ್ಳಾಜೆ, ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳಾದ ತಹಶೀಲ್ದಾರ್ ಪುರಂದರ ಹೆಗ್ಡೆ ಆಯುಷ್ ಅಧಿಕಾರಿ,ಮಹಮ್ಮದ್ ಇಕ್ವಾಲ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/04/2022 08:22 am

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ