ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಗ್ರಾಮೀಣ ಮಟ್ಟದಲ್ಲಿ ಆರೋಗ್ಯ ಶಿಬಿರಗಳು ಸಹಾಯಕಾರಿ

ಮುಲ್ಕಿ:ಗ್ರಾಮೀಣ ಮಟ್ಟದಲ್ಲಿ ಆರೋಗ್ಯ ಶಿಬಿರಗಳು ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಸಹಕಾರಿಯಾಗುತ್ತಿದೆ ಎಂದು ಶಾಸಕ ಉಮನಾಥ ಕೋಟ್ಯಾನ್ ಹೇಳಿದರು.

ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬಿಜೆಪಿಯ ಮುಲ್ಕಿ -ಮೂಡುಬಿದಿರೆ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆದಿತ್ಯವಾರ ಜರಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಧಾರ್ಮಿಕ ಪರಿಷತ್‌ಸದಸ್ಯ ಭುವನಾಭಿರಾಮ ಉಡುಪ, ಮಹಿಳಾ ಮೋರ್ಚಾದ ಅಧ್ಯಕ್ಷೆ ಶಶಿಕಲಾ ಶೆಟ್ಟಿ , ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹರ್ಷಿತ್ , ಬಿಜೆಪಿಯ ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಸದಸ್ಯ ದೇವಪ್ರಸಾದ್ ಪುನರೂರು ಹಾಗೂ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿರಿದ್ದರು.

ಪ್ರಧಾನ ಕಾರ್ಯದರ್ಶಿಗಳಾದ ಭಾರತಿ ಶೆಟ್ಟಿ ಸ್ವಾಗತಿಸಿದರು, ತಾ ಪ್ರವೀಣ್ ನಿರೂಪಿಸಿ ,ವಂದಿಸಿದರು. ಶಿಬಿರದಲ್ಲಿ ಸ್ತ್ರೀ ರೋಗ ,ಮಕ್ಕಳ,ಎಲುಬು ಮತ್ತು ಮೂಳೆ, ಬಿ.ಪಿ,ಶುಗರ್ ಪರೀಕ್ಷೆ ನಡೆಸಲಾಯಿತು. ೧೦೦ ಕ್ಕೂ ಮಿಕ್ಕಿ ಜನರು ಶಿಬಿರದ ಪ್ರಯೋಜನ ಪಡೆದರು.

Edited By : PublicNext Desk
Kshetra Samachara

Kshetra Samachara

14/03/2022 07:47 am

Cinque Terre

1.77 K

Cinque Terre

0

ಸಂಬಂಧಿತ ಸುದ್ದಿ