ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಕೋಟೆಪುರದಲ್ಲಿ 80ನೇ ಬೃಹತ್ ರಕ್ತದಾನ ಶಿಬಿರ

ಮಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಉಳ್ಳಾಲ ಘಟಕ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ಕೆಎಂಸಿ ರಕ್ತನಿಧಿ ಮಂಗಳೂರು ಸಹಯೋಗದಲ್ಲಿ 80ನೇ ಬೃಹತ್ ರಕ್ತದಾನ ಶಿಬಿರ ಉಳ್ಳಾಲ ಕೋಟೆಪುರ ಟಿಪ್ಪು ಸುಲ್ತಾನ್ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಜಲೀಲ್ ಮುಡಿಪು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನಿಷ್ಕಳಂಕ ಸಮಾಜ ಸೇವೆಯ ತುಡಿತ ದೇವರ ಸಂತೃಪಿಗೆ ಪಾತ್ರವಾಗಲಿದೆ. ಸಾವಿರಾರು ರೋಗಿಗಳು ದಿನನಿತ್ಯ ರಕ್ತದ ಸಮಸ್ಯೆಯಿಂದ ಬಳಲುತ್ತಿದ್ದು ಅಂತವರಿಗೆ ರಕ್ತ ಪೂರೈಸಲು ಇಂತಹ ಸಮಾಜಮುಖಿ ಕಾರ್ಯದಿಂದ ಸಾಧ್ಯ ಎಂದರು.

ಕೆಎಂಸಿ ರಕ್ತ ನಿಧಿ ವಿಭಾಗ ತಾಂತ್ರಿಕ ಮುಖ್ಯಸ್ಥರಾದ ಶ್ರೀ ಜಿ.ಥೋಮಸ್ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಮಾಜ ಸೇವಕ ಎ.ಕೆ. ಮೊಯಿದ್ದೀನ್ ಅಧ್ಯಕ್ಷತೆ ವಹಿಸಿದ್ದರು.

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಲಹೆಗಾರ ಸುಲೈಮಾನ್ ಶೇಕ್ ಬೆಳುವಾಯಿ,ಕರ್ನಾಟಕ ರಕ್ಷಣಾ ವೇದಿಕೆ ಉಳ್ಳಾಲ ಘಟಕದ ಅಧ್ಯಕ್ಷ ಫೈರೋಝ್ ಡಿ.ಎಂ., ಕಾರ್ಯದರ್ಶಿ ಮುರುಗೇಶ್ ಉಳ್ಳಾಲ್, ಸದಸ್ಯರಾದ ಇಫ್ತಿಕಾರ್ ಅಹ್ಮದ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕಲಾಯಿ,ಕೋಶಾಧಿಕಾರಿ ಸತ್ತಾರ್ ಪುತ್ತೂರು, ಕಾರ್ಯದರ್ಶಿ ಬಶೀರ್ ಮಂಗಳೂರು, ಮಾಧ್ಯಮ ಕಾರ್ಯದರ್ಶಿ ಜಲೀಲ್ ಉಳ್ಳಾಲ, ರಕ್ತ ಪೂರೈಕೆ ವಿಭಾಗದ ಉಸ್ತುವಾರಿ ಮುಸ್ತಫಾ ಕೆ.ಸಿ.ರೋಡ್, ಶಿಬಿರದ ಕಾರ್ಯನಿರ್ವಾಹಕ ಅಲ್ಮಾಝ್ ಉಳ್ಳಾಲ, ಶಹಜಹಾನ್ ಮುಕ್ಕ , ಖಾದರ್ ಮುಂಚೂರು,ರಾಫೀಝ್ ಕೃಷ್ಣಾಪುರ ಮೊದಲಾದವರು ಉಪಸ್ಥಿತರಿದ್ದರು.

ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಸಂಚಾಲಕ ಶಂಶುದ್ದೀನ್ ಬಳ್ಕುಂಜೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯನಿರ್ವಾಹಕ ಅಬ್ದುಲ್ ಹಮೀದ್ ಗೋಳ್ತಮಜಲ್ ನಿರೂಪಿಸಿ, ವಂದಿಸಿದರು.

Edited By : Nagaraj Tulugeri
Kshetra Samachara

Kshetra Samachara

29/12/2020 11:10 am

Cinque Terre

4.39 K

Cinque Terre

0

ಸಂಬಂಧಿತ ಸುದ್ದಿ