ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಾಸ್ಕ್ ಧರಿಸದೇ ಸಂಚರಿಸಿದರೆ ದಂಡ ಎಷ್ಟು ಗೊತ್ತಾ?

ಮಂಗಳೂರು: ಜಿಲ್ಲೆಯಲ್ಲಿ ದೀನೇ ದಿನೆ ಕೊವಿಡ್-19 ಸೋಂಕು ವೇಗವಾಗಿ ಹರಡುತ್ತಿರುವ ನಿಟ್ಟಿನಲ್ಲಿ ಅದರ ತಡೆಗೆ ನಗರ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ.

ನಗರದ ಆಯಾ ಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಮಾಸ್ಕ್ ಧರಿಸದೇ ಸಂಚರಿಸುವವರನ್ನು ತಡೆದು ನಿಲ್ಲಿಸಿ 100ರೂ. ದಂಡ ವಸೂಲಿ ಮಾಡುತ್ತಿದ್ದಾರೆ. ಜೊತೆಗೆ ಮನೆಯಿಂದ ಹೊರಡುವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಾರ್ವಜನಿಕರನ್ನು ವಿನಂತಿಸುತ್ತಿದ್ದಾರೆ.

ಅಲ್ಲದೆ, ದ್ವಿಚಕ್ರ ವಾಹನಗಳಲ್ಲಿ ಒಬ್ಬರೇ ಓಡಾಡುವಾಗ ಮಾಸ್ಕ್ ಕಡ್ಡಾಯವಲ್ಲ ಎಂಬ ಸರಕಾರದ ಸೂಚನೆ ಇದ್ದರೂ ಪೊಲೀಸರು, ಮಾಸ್ಕ್ ಧರಿಸದೆ ದ್ವಿಚಕ್ರವಾಹನಗಳನ್ನು ಸಂಚರಿಸುತ್ತಿರುವವರನ್ನು ತಡೆದು ದಂಡ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ಆರೋಪಿಸಿದರು.

Edited By :
Kshetra Samachara

Kshetra Samachara

24/09/2020 07:37 pm

Cinque Terre

22.55 K

Cinque Terre

0

ಸಂಬಂಧಿತ ಸುದ್ದಿ