ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಕ್ವದಲ್ಲಿ ನಾನಾ ಯೋಜನೆ ಮಾಹಿತಿ, ರೋಜ್ ಗಾರ್ ದಿನಾಚರಣೆ

ಮುಲ್ಕಿ: ಅತಿಕಾರಿಬೆಟ್ಟು ಗ್ರಾಪಂ, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ, ಮಂಗಳೂರು ಮತ್ತು ಕಕ್ವ ಭ್ರಾಮರಿ ಮಹಿಳಾ ಮಂಡಳಿ ಸಹಯೋಗದಲ್ಲಿ ಕಕ್ವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಗ್ರಾಪಂ ಮಾಹಿತಿ ಕಾರ್ಯಕ್ರಮ ಮತ್ತು ರೋಜ್ ಗಾರ್ ದಿನಾಚರಣೆ ಜರುಗಿತು.

ಸಂಪನ್ಮೂಲ ವ್ಯಕ್ತಿ ಸಂಶುದ್ದೀನ್ ಅವರು "ಮಾನವ ಹಕ್ಕುಗಳು ಮತ್ತು ಮಹಿಳಾ ಪರ ಕಾನೂನುಗಳು" ಎಂಬ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಮಂಗಳೂರು ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಲತೇಶ್ ಅವರು ಆರ್ಥಿಕತೆ ಮತ್ತು ಬ್ಯಾಂಕಿಂಗ್ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು. ರೋಜ್ ಗಾರ್ ದಿನಾಚರಣೆ ಅಂಗವಾಗಿ ಗ್ರಾಮದ ಅಭಿವೃದ್ಧಿಗಾಗಿ ನರೇಗಾ ಯೋಜನೆ ಬಗ್ಗೆ ತಿಳಿಸಲಾಯಿತು.

"ನಮ್ಮ ಗ್ರಾಮ, ನಮ್ಮ ಜವಾಬ್ದಾರಿ" "ನಮ್ಮ ನಡಿಗೆ... ತ್ಯಾಜ್ಯ ಮುಕ್ತ ಕಡೆಗೆ" ಆಂದೋಲನದ ಭಾಗವಾಗಿ "ಸ್ವಚ್ಛತೆ ಅಂದರೆ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿ" ವಿಚಾರದ ಬಗ್ಗೆ ಅರಿವು ಮೂಡಿಸಲಾಯಿತು. ಪ್ರಜ್ಞಾ ಸಲಹಾ ಕೇಂದ್ರದ ವಿಲಿಯಂ ಸ್ಯಾಮ್ಯುವೆಲ್ , ಅಶೋಕ್ , ಅತಿಕಾರಿಬೆಟ್ಟು ಗ್ರಾಪಂ ಸದಸ್ಯರಾದ ಜಯಕುಮಾರ್ ಮತ್ತು ಸುಧಾಕರ ಶೆಟ್ಟಿ, ಮಾಜಿ ಸದಸ್ಯೆ ಸುಮತಿ ಹಾಗೂ ಭ್ರಾಮರಿ ಮಹಿಳಾ ಮಂಡಳಿ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Edited By : Nagaraj Tulugeri
Kshetra Samachara

Kshetra Samachara

30/01/2021 09:06 pm

Cinque Terre

2.43 K

Cinque Terre

0

ಸಂಬಂಧಿತ ಸುದ್ದಿ