ಕಟೀಲು: ಶರನ್ನವರಾತ್ರಿ ಉತ್ಸವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ, ನಿರಂತರ ಒಂಬತ್ತು ದಿನಗಳ ಕಾಲ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ.
ನವರಾತ್ರಿ ಸಂದರ್ಭ ಕಟೀಲು ದೇವಳಕ್ಕೆ ಮೂರು ಗ್ರಾಮಗಳಿಂದ ಹುಲಿವೇಷ ಮೆರವಣಿಗೆ ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ, ನವರಾತ್ರಿಯ ಮೂರನೇ ದಿನ ಕಟೀಲುನಿಂದ, ಐದನೇ ದಿನ ಅಂದರೆ ಲಲಿತ ಪಂಚಮಿ ದಿನ ಕೊಡೆತ್ತೂರು, ಮತ್ತು ಏಳನೇ ದಿನ ಅಂದರೆ ಮೂಲನಕ್ಷತ್ರದ ದಿನ ಎಕ್ಕಾರಿನಿಂದ ಹುಲಿವೇಷ ಮೆರವಣಿಗೆ ಬರುತ್ತದೆ, ಮೆರವಣಿಗೆಯಲ್ಲಿ ಹುಲಿವೇಷ ಮಾತ್ರವಲ್ಲದೆ, ಬೇರೆ ಬೇರೆ ವೇಷಗಳು, ವಿವಿಧ ಸ್ಥಬ್ದ ಚಿತ್ರಗಳು ಸಾಥ ನೀಡುತ್ತದೆ, ಮೆರವಣಿಗೆ ಕಟೀಲು ತಲುಪಿ ನಂತರ ದೇವಳದ ಮುಂಭಾಗ ಕುಣಿದು ಪ್ರಸಾದ ಸ್ವೀಕರಿಸಿ ನಂತರ ಮುಕ್ತಾಯವಾಗುತ್ತದೆ.
ಕಟೀಲಿನಲ್ಲಿ ಚಂಡಿಕಾ ಹೋಮ, ರಂಗಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದರೆ, ಮಹಾನವಮಿ ಸುಮಾರು 2000 ದಷ್ಟು ವಾಹನಗಳು ಪೂಜೆಗೊಳ್ಳುತ್ತದೆ ಅಲ್ಲದೆ ರಾತ್ರಿ ಸುಮಾರು ಒಂದು ಗಂಟೆಗಳ ಕಾಲ ರಂಗಪೂಜೆ ನಡೆಯುತ್ತಿದ್ದು ಬೇರೆ ಬೇರೆ ರೀತಿಯ ಸುಮಾರು650 ಆರತಿಗಳನ್ನು ಬಳಸಲಾಗುತ್ತದೆ, ವಿಜಯದಶಮಿ ದಿನ ಬೆಳ್ಳಿಗೆ ಅಕ್ಷರಾಭ್ಯಾಸ ನಡೆಯುತ್ತದೆ ಹೀಗೆ ನವರಾತ್ರಿ ಕಟೀಲಿನಲ್ಲಿ ವಿಶೇಷತೆ ಪಡೆದಿದೆ.
Kshetra Samachara
28/09/2022 02:42 pm