ಕಟೀಲು :ವಿವಿಧೆಡೆ ಯಕ್ಷಗಾನ ಕಲಿಸುವ ಗುರುಗಳನ್ನೇ ಸೇರಿಸಿಕೊಂಡು, ಚೀಟಿ ಎತ್ತಿ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಪ್ರದರ್ಶನ ನೀಡುವಂತಹ ಯಕ್ಷ ಶಿಕ್ಷಕರ ವಿನೂತನ ಯಕ್ಷಗಾನ ಕಟೀಲು ದುರ್ಗಾಪರಮೇಶ್ವರೀ ದೇವಳದ ಸರಸ್ವತೀ ಸದನದಲ್ಲಿ ನಡೆಯಿತು.
ಖ್ಯಾತ ಕಲಾವಿದ ಯಕ್ಷಗುರು ಲಕ್ಷ್ಮಣ ಮರಕಡ ನೇತೃತ್ವದ ಶುಭವರ್ಣ ಯಕ್ಷ ಸಂಪದದ ಸಂಯೋಜನೆಯಲ್ಲಿ ನಡೆದ ಕೃಷ್ಣ ಪಾರಿಜಾತ ನರಕಾಸುರ ವಧೆ ಗದಾಯುದ್ಧ ಪ್ರಸಂಗಗಳಲ್ಲಿ ರವಿ ಮುಂಡಾಜೆ. ಶಿವಕುಮಾರ ಮೂಡುಬಿದ್ರೆ, ಹರಿರಾಜ ಕಿನ್ನಿಗೋಳಿ. ಓಂಪ್ರಕಾಶ್. ರಾಜೇಶ್ ಬೆಳ್ಳಾರೆ, ಸುನಿಲ್ ಪಲ್ಲಮಜಲು, ಕಾರ್ತಿಕ್. ಗಣೇಶ ಪಾಲೆಚ್ಚಾರು, ವಿಶ್ವನಾಥ ಪದ್ಮುಂಜ. ಸಂತೋಷ ಕರಂಬಾರು. ಅಶ್ವತ್ ಕುಲಾಲ್ ಮುಂತಾದ ಕಲಾವಿದರು ಪಾತ್ರವಹಿಸಿದರು.
ಪಾತ್ರಗಳನ್ನು ಊಹಿಸಿದ ಪ್ರೇಕ್ಷಕರಿಗೆ ನಗದು ಬಹುಮಾನ ನೀಡಲಾಯಿತು. ಉದ್ಘಾಟನೆ ಸಮಾರಂಭದಲ್ಲಿ ಕಟೀಲು ವಾಸುದೇವ ಆಸ್ರಣ್ಣ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಶಿವರಾಮ ಪಣಂಬೂರು. ಪ್ರಭಾಕರ ಸುವರ್ಣ, ಶ್ರುತಕೀರ್ತಿ ರಾಜ, ಸಿರಿಬಾಗಿಲು ರಾಮಕೃಷ್ಣ ಮಯ್ಯ ಉಪಸ್ಥಿತರಿದ್ದರು.
Kshetra Samachara
21/08/2022 07:23 pm