ಮುಲ್ಕಿ: ತಮಿಳುನಾಡು ಮುಖ್ಯಮಂತ್ರಿಯಿಂದ ಚೆನ್ನೈನಲ್ಲಿ "ನಾದಸ್ವರ ಸೆಲ್ವಂ" ಪ್ರಶಸ್ತಿ ಪಡೆದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಖ್ಯಾತ ನಾಗಸ್ವರ ವಾದಕ ನಾಗೇಶ್ ಬಪ್ಪನಾಡು ರವರನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.
ದೇವಸ್ಥಾನದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ವಿಶೇಷ ಪ್ರಾರ್ಥನೆ ನಡೆಸಿ ನಾಗಸ್ವರ ವಾದನದ ಮೂಲಕ ಕಲೆಯನ್ನು ಆರಾಧಿಸಿ ವಿಶೇಷ ಗೌರವ ಪಡೆದು ಮುಲ್ಕಿಗೆ ಕೀರ್ತಿ ತಂದ ನಾಗೇಶ್ ಬಪ್ಪನಾಡು ಸಾಧನೆ ಅನುಕರಣೀಯ ಎಂದರು.
ಈ ಸಂದರ್ಭ ದೇವಸ್ಥಾನದ ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಅನುವಂಶಿಕ ಮೊಕ್ತೇಸರ ಹಾಗೂ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಉದ್ಯಮಿ ಎಂಎಚ್ ಅರವಿಂದ ಪೂಂಜ, ಮುಲ್ಕಿ ನಪಂ ಅಧ್ಯಕ್ಷ ಸುಭಾಶ್ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ,ಬಪ್ಪನಾಡು ಬ್ರಹ್ಮಕಲಶೋತ್ಸವ ಸಮಿತಿಯ ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಗೋಪಾಲಕೃಷ್ಣ ಭಟ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಅಕೌಂಟೆಂಟ್ ಶಿವಶಂಕರ್, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/06/2022 01:56 pm