ಮುಲ್ಕಿ: ಹಳೆಯಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 32ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಾಭಾವಿ ಸಭೆ ಶ್ರೀನಿವಾಸ ಕಲಾ ಮಂದಿರದಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷೆ ಪ್ರೇಮಲತಾ ಯೋಗೀಶ್ ಅಧ್ಯಕ್ಷತೆ ವಹಿಸಿ, 32ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ರೂಪುರೇಷೆಗಳನ್ನು ಸಭೆಯ ಮುಂದಿರಿಸಿ, ಸಂಘಟನೆ ಬಲಪಡಿಸುವುದರ ಜೊತೆಗೆ ಹಬ್ಬವನ್ನು ಶಾಂತಿಯುತವಾಗಿ, ಯಶಸ್ವಿಯಾಗಿ ಆಚರಿಸಿ ಮಾದರಿಯಾಗೋಣ ಎಂದರು.
ಬಳಿಕ ಹಿಂದಿನ ಸಭೆಯ ನಡಾವಳಿಯನ್ನು ಸಭೆಯ ಮುಂದಿರಿಸಿ ಒಪ್ಪಿಗೆಯನ್ನು ಚರ್ಚೆಯ ಬಳಿಕ ಸಭೆಯಲ್ಲಿ ಒಪ್ಪಿಗೆಯನ್ನು ಪಡೆಯಲಾಯಿತು. ಪ್ರಧಾನ ಕಾರ್ಯದರ್ಶಿ ಯಂ.ಕೃಷ್ಣ ಹೆಬ್ಬಾರ್ ಸ್ವಾಗತಿಸಿದರು.ಕೋಶಾಧಿಕಾರಿ ಶ್ರೀಧರ್ ಶೆಟ್ಟಿಗಾರ್ ಧನ್ಯವಾದ ಅರ್ಪಿಸಿದರು.
Kshetra Samachara
19/06/2022 10:04 pm