ಮುಲ್ಕಿ: ರಕ್ತದಾನದಿಂದ ನುತ್ತೋಬ್ಬರ ಜೀವ ಉಳಿಸಲು ಸಾಧ್ಯವಿದ್ದು ಯುವ ಸಂಸ್ತೆಗಳು ಸಮಾಜ ಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಎಸ್. ಕೋಡಿ ಲೋಕಮುಖಿ ಟ್ರಸ್ಟ್ ಅಧ್ಯಕ್ಷ ಡಾ| ಸೋಂದಾ ಭಾಸ್ಕರ ಭಟ್ ಹೇಳಿದರು.
ಪಕ್ಷಿಕೆರೆ ಕೆಮ್ರಾಲ್ ಗ್ರಾ.ಪಂ ಸುಮುದಾಯ ಭವನದಲ್ಲಿ ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ ಯ ನೇತೃತ್ವದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ , ವೆನ್‌ಲಾಕ್ ಆಸ್ಪತ್ರೆ ಮಂಗಳೂರು, ಲೋಕಮುಖಿ ಟ್ರಸ್ಟ್ ಎಸ್ ಕೋಡಿ, ಪಕ್ಷಿಕೆರೆ ರಿಕ್ಷಾ ಚಾಲಕ- ಮಾಲಕರ ಸಂಘ , ಮತ್ತು ಚರ್ಚ್ ನಿಲ್ದಾಣ , ದುರ್ಗಾ ಶಕ್ತಿ ಕೆಮ್ರಾಲ್ ಮಂಡಲ , ತೋಕೂರು ಯುವಕ ಸಂಘ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ವೆನ್‌ಲಾಕ್‌ನ ರಕ್ತನಿಧಿಯ ಘಟಕದ ಸಂಯೋಜಕ ಅಂಟ್ಯನಿ ಡಿಸೋಜ ಮಾಹಿತಿ ನೀಡಿ ಮಾತನಾಡಿ ಒಬ್ಬ ಆರೋಗ್ಯವಂತ ವ್ಯಕ್ತಿ ನೀಡಿದ ರಕ್ತವು ನಾಲ್ಕರಿಂದ ಐದು ಜನರಿಗೆ ಜೀವ ಉಳಿಸಲು ಸಹಕಾರಿಯಾಗಬಲ್ಲದು , ಮಂಗಳೂರುನಲ್ಲಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ದಿನ 24 ಗಂಟೆಯು ರಕ್ತನಿಧಿ ಘಟಕದ ತಂಡ ಮುಂಚೂಣಿಯಲ್ಲಿದ್ದು ಸಾರ್ವಜನಿಕರು ಬೇಟಿ ನೀಡಿ ರಕ್ತದಾನ ಮಾಡಬಹುದು ಎಂದರು
ಕೆಮ್ರಾಲ್ ಗ್ರಾ ಪಂ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ವೆನ್‌ಲಾಕ್ ಆಸ್ಪತ್ರೆಯ ಡಾ| ಫಲಕ್, ರಿಕ್ಷಾಚಾಲಕರ ಸಂಘದ ಅಧ್ಯಕ್ಷ ಗೋವಿಂದ ಶೆಟ್ಟಿಗಾರ್, ಗಣೆಶೋತ್ಸವ ಸಮಿತಿಯ ಅಧ್ಯಕ್ಷ ಗಣಪತಿ ಆಚಾರ್ಯ, ನೆಹರು ಯುವ ಕೇಂದ್ರದ ಸಂಯೋಜಕ ಪ್ರೀತೇಶ್, ದರ್ಗಾ ಶಕ್ತಿ ಕೆಮ್ರಾಲ್ ಮಂಡಲದ ಅಧ್ಯಕ್ಷೆ ಗೀತಾ ಜಿ. ಶೆಟ್ಟಿ , ವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷ ಚಂದ್ರಹಾಸ್ ಮತ್ತಿತರರು ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಧನಂಜಯ ಶೆಟ್ಟಿಗಾರ್ ಸ್ವಾಗತಿಸಿದರು. ಸುಮಂತ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
19/06/2022 04:43 pm